







ಪುತ್ತೂರು: ಚಿನ್ನಾಭರಣ ಉದ್ಯಮ ಕ್ಷೇತ್ರದಲ್ಲಿ ಪುತ್ತೂರಿನ ಹೆಸರನ್ನು ರಾಜ್ಯದ ವಿವಿಧೆಡೆ ಗುರುತಿಸುವಂತೆ ಮಾಡಿದ ಪ್ರಸಿದ್ಧ ಉದ್ಯಮಿ, ಸಮಾಜಮುಖಿ ಹಾಗೂ ಕೊಡುಗೈ ದಾನಿ 81 ವರ್ಷ ವಯೋಮಾನದ ಸರಾಫ್ ಮುಳಿಯ ಶ್ಯಾಮ ಭಟ್ ಅವರ ಅಂತಿಮ ಯಾತ್ರೆ ಅ.6ರಂದು ಪುತ್ತೂರಿನಲ್ಲಿ ನಡೆಯಿತು.


ಪಾಂಗ್ಲಾಯಿಯ ‘ಶ್ಯಾಮಲೋಚನಾ’ ನಿವಾಸದಲ್ಲಿ ಬೆಳಿಗ್ಗೆ ಶಾಸ್ತ್ರೋಕ್ತವಾಗಿ ನಡೆದ ಅಂತಿಮ ಯಾತ್ರೆಯ ಸಿದ್ದತೆಯ ಬಳಿಕ ಆರಂಭಗೊಂಡ ಅಂತಿಮ ಯಾತ್ರೆಯಲ್ಲಿ ಕುಟುಂಬಸ್ಥರು, ಬಂಧು-ಬಳಗ, ಉದ್ಯಮ ಕ್ಷೇತ್ರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ನೇಹಿತರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡು ಭಾವಪೂರ್ಣ ವಿದಾಯ ಸಲ್ಲಿಸಿದರು.













