







ನೆಲ್ಯಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ ನಡೆದ ಉಪ್ಪಿನಂಗಡಿ ವಲಯಮಟ್ಟದ ಹದಿನಾಲ್ಕರ ಹಾಗೂ ಹದಿನೇಳರ ವಯೋಮಾನದ ಕ್ರೀಡಾಕೂಟದಲ್ಲಿ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.


17ರ ವಯೋಮಾನದ ಬಾಲಕರ ವಿಭಾಗದಲ್ಲಿ ವರುಣ್ ಎಂ.ಡಿ. 100 ಮೀಟರ್, 200 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಿಯಾಗಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು. ಪ್ರಣಮ್ಯ ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ತೃತೀಯ, ಆದರ್ಶ್ ಜೋಷಿ ತ್ರಿವಿಧ ಜಿಗಿತದಲ್ಲಿ ಪ್ರಥಮ, ಶಿಫಾ ಸಂತೋಷ್ ಗುಂಡೆಸೆತದಲ್ಲಿ ತೃತೀಯ ಸ್ಥಾನ ಪಡೆದುಕೊಂಡರು. ಹದಿನಾಲ್ಕರ ವಯೋಮಾನದ ಎತ್ತರ ಜಿಗಿತದಲ್ಲಿ ಅನುಷ್ಕಾ ತೃತೀಯ ಸ್ಥಾನ ಪಡೆದುಕೊಂಡರು. ಇವರಿಗೆ ಸಂಸ್ಥೆಯ ಸಹ ಸಂಚಾಲಕರಾದ ಡೀಕನ್ ಜಾರ್ಜ್, ಮುಖ್ಯ ಶಿಕ್ಷಕ ಪ್ರಕಾಶ್, ಶಿಕ್ಷಕಿ ನಿಕ್ಷಿತಾ ಅವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಜಿಮ್ಸನ್ ವರ್ಗೀಸ್ ತರಬೇತಿ ನೀಡಿದ್ದರು.













