









ಕಾಣಿಯೂರು : ಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿ, ಶ್ರೀ ಕಾಣಿಯೂರು ರಾಮತೀರ್ಥ ಮಠ, ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.11ರಿಂದ ಅ 20ರವರೆಗೆ ನಡೆಯಲಿದೆ. ನವರಾತ್ರಿ ಉತ್ಸವ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಪ್ರತಿದಿನ ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ, ಕುಣಿತ ಭಜನಾ ತಂಡಗಳಿಂದ ಕುಣಿತ ಭಜನಾಸೇವೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.



ಅ 15ರಂದು ಬೆಳಿಗ್ಗೆ ಶ್ರೀ ಅಮ್ಮನವರ ಕ್ಷೇತ್ರದಲ್ಲಿ ಚಂಡಿಕಾ ಹೋಮ ಹಾಗೂ 12 ಕಾಯಿ ಗಣಹೋಮ ನಡೆಯಲಿದ್ದು, ಬೆಳಿಗ್ಗೆ ಚಂಡಿಕಾ ಹೋಮ, ಗಣಹೋಮ, ಹೋಮದ ಪೂರ್ಣಾಹುತಿ ಹಾಗೂ ಸಂಕ್ಷಿಪ್ತ ಪ್ರವಚನ, ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಅ 19ರಂದು ಸಂಜೆ ಆಯುಧ ಪೂಜೆ ನಡೆಯಲಿದೆ ಎಂದು ಕಾಣಿಯೂರು ಶ್ರೀ ಮಠದ ಮ್ಯಾನೇಜರ್ ಶ್ರೀನಿಧಿ ಆಚಾರ್ ತಿಳಿಸಿದ್ದಾರೆ.










