







ಉದನೆ ಸಂತ ಅಂತೋನಿಸ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಶಸ್ತಿ


ಉಪ್ಪಿನಂಗಡಿ: ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿ ಇಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ೨೦೨೬-೨೭ನೇ ಸಾಲಿನ ಪ್ರೌಢಶಾಲಾ ಬಾಲಕರ ಕ್ರೀಡಾಕೂಟದಲ್ಲಿ ಉದನೆ ಸಂತ ಆಂತೋನಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.



ಪ್ರಣಿತ 1500 ಮೀ. ಓಟದಲ್ಲಿ ದ್ವಿತೀಯ,3000 ಮೀ.ಓಟದಲ್ಲಿ ತೃತೀಯ, ವರ್ಷ ಬಿ. ಉದ್ದ ಜಿಗಿತದಲ್ಲಿ ದ್ವಿತೀಯ, ೨೦೦ ಮೀ.ಓಟಲ್ಲಿ ತೃತೀಯ, ಅಂಕಿತ 3000 ಮೀ.ಓಟದಲ್ಲಿ ತೃತೀಯ, ಜೋಶ್ಮಿ ೬೦೦ ಮೀ.ಓಟದಲ್ಲಿ ಪ್ರಥಮ, 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಸಂಸ್ಥೆಯ ಸಹ ಸಂಚಾಲಕರಾದ ಡೀಕನ್ ಜಾರ್ಜ್, ಮುಖ್ಯಶಿಕ್ಷಕ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ರೈ ಎಸ್.ತರಬೇತಿ ನೀಡಿದ್ದರು.










