ಸಾರೆಪುಣಿಯ ಫಾತಿಮತ್ ನಿಶಾನ ಕೊಲೆ ಪ್ರಕರಣ : ಪ್ರಮುಖ ಆರೋಪಿಗೂ ಜಾಮೀನು ಮಂಜೂರು

0

ಕಾಣಿಯೂರು:ಸುಳ್ಯ ಸಂಪಾಜೆಯ ಕಡೆಪಾಲದಲ್ಲಿ ನಡೆದಿದ್ದ ಕುಂಬ್ರ ಸಾರೆಪುಣಿಯ ಫಾತಿಮತ್ ನಿಶಾನ ಕೊಲೆ ಪ್ರಕರಣದ ಪ್ರಮುಖ ಆರೋಪಿಗೂ ಇದೀಗ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಕುಂಬ್ರ ಸಮೀಪದ ಸಾರೆಪುಣಿಯ ಜುಬೈದಾ ಎಂಬವರ ಪುತ್ರಿ, ಸಂಪಾಜೆ ಕಡೆಪಾಲ ಆಲಿಗುಡ್ಡೆ ನಿವಾಸಿ ಸಿ.ಪಿ.ಅಳವಿ ಕುಟ್ಟಿ ಎಂಬವರ ಮಗ ಅನ್ಸಾರ್ ಅವರ ಪತ್ನಿ ಫಾತಿಮತ್ ನಿಶಾನ(22ವ.)ಅವರು ಕಳೆದ ಜು.18ರಂದು ಪತಿಯ ಮನೆಯಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದರು.ಮಗಳು ಫಾತಿಮಾ ನಿಶಾನಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತರ ತಾಯಿ ಜುಬೈದಾ ಅವರು ದೂರು ನೀಡಿದ್ದರು.ಮಗಳು ಫಾತಿಮಾ ನಿಶಾನಳ ಗಂಡ ಅನ್ಸಾರ್ ಬೆಂಗಳೂರುನಲ್ಲಿದ್ದು ಆತ ಆಕೆಯನ್ನೂ ಬೆಂಗಳೂರುಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ.ನೀನು ಅವಳನ್ನು ಬೆಂಗಳೂರುಗೆ ಕರೆದುಕೊಂಡು ಹೋದರೆ ಮತ್ತೆ ಮನೆಗೆ ಬರಬಾರದು ಎಂದು ಬೆದರಿಸಿ, ಮಗಳನ್ನು ಆಕೆಯ ಅತ್ತೆ ಮತ್ತು ಮಾವ ಮನೆಯಲ್ಲಿ ಇರಿಸಿಕೊಂಡರು.ನನ್ನ ಮಗಳನ್ನು ಆಕೆಯ ಮಾವ ಅಳವಿ,ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ಸೇರಿಕೊಂಡು ಕೊಂದಿರುವುದಾಗಿ ಜುಬೈದಾ ಅವರು ದೂರಿನಲ್ಲಿ ಆರೋಪಿಸಿದ್ದರು.ಆರಂಭದಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಸುಳ್ಯ ಪೊಲೀಸರು ಜುಬೈದಾ ಅವರ ದೂರಿನ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮೂರು ಮಂದಿ ಆರೋಪಿಗಳನ್ನೂ ಜು.22ರಂದು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಆಯಿಷಾ ಸಿ.ಎ.ಮತ್ತು ಫಸೀಲಾ ಸಿ.ಎ. ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೆಲವು ದಿನಗಳ ಹಿಂದೆ ಜಾಮೀನು ಮಂಜೂರುಗೊಳಿಸಿತ್ತು.ಇದೀಗ ಪ್ರಮುಖ ಆರೋಪಿ ಸಿ.ಪಿ.ಅಳವಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರವಾಗಿ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ.ಗೌಡ,ರಾಜೇಶ್ ಬಿ.ಜಿ.,ಶ್ಯಾಮ್‌ಪ್ರಸಾದ್ ಎನ್.ಕೆ.,ವಿಮಲೇಶ್ ಆರ್.ಗೌಡ ವಾದಿಸಿದ್ದರು.

LEAVE A REPLY

Please enter your comment!
Please enter your name here