







ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ಜೂಡೋ ಪಂದ್ಯಾಟದಲ್ಲಿ ಧನ್ವಿ ಸಣ್ಣಗುತ್ತು -63 ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ವಿಟ್ಲ ಜೆ.ಸಿ. ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೋಟರಿ ವಕೀಲರು ಹಾಗೂ ವಿಟ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮತ್ತು ಶ್ವೇತಾ ದಂಪತಿಯ ಪುತ್ರಿಯಾಗಿರುತ್ತಾರೆ. ಇವರಿಗೆ ಮಾಧವ ಅಳಿಕೆ ಇವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್.ಎನ್, ನಿಖಿಲ್ ಕೆ.ಟಿ, ತನುಶ್ರೀ ಡಿ. ಬಂಗೇರ, ಭವಿಶ್ ಸಿಂಹಮೂಲೆ, ಸುಧೀನ್ ಆಚಾರ್ ತರಬೇತಿ ನೀಡಿರುತ್ತಾರೆ.












