ಅ.27-30: ಬೆಂಗಳೂರಿನಲ್ಲಿ ರಾಷ್ಟ್ರಪತಿ ಸ್ಕೌಟ್ಸ್-ಗೈಡ್ಸ್ ರೋವರ‍್ಸ್-ರೇಂಜರ‍್ಸ್ ಪ್ರೆಸಿಡೆಂಟ್ ಅವಾರ್ಡ್ ಸರ್ಟಿಫಿಕೇಟ್ ರಾಜ್ಯಮಟ್ಟದ ಪರೀಕ್ಷಾ ಶಿಬಿರ

0

ಪುತ್ತೂರು: ರಾಷ್ಟ್ರಪತಿ ಸ್ಕೌಟ್ಸ್ – ಗೈಡ್ಸ್ ರೋವರ‍್ಸ್-ರೇಂಜರ‍್ಸ್ ಹಾಗೂ ಪ್ರೆಸಿಡೆಂಟ್ ಅವಾರ್ಡ್ ಸರ್ಟಿಫಿಕೇಟ್ ರಾಜ್ಯಮಟ್ಟದ ಪರೀಕ್ಷಾ ಶಿಬಿರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಡಾ||ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಆಯೋಜಿಸಲಾಗಿದೆ.


ಶಿಬಿರ ಅ.27ರಿಂದ ಆರಂಭಗೊಳ್ಳಲಿದ್ದು ಬೆಳಿಗ್ಗೆ 8 ಗಂಟೆಯೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಅ.31ರವರೆಗೆ ಶಿಬಿರ ನಡೆಯಲಿದ್ದು ಈಗಾಗಲೇ ರಾಷ್ಟ್ರಸಂಸ್ಥೆಯಿಂದ ಆಯ್ಕೆಯಾದ ಸ್ಕೌಟ್ಸ್ ಗೈಡ್ಸ್, ರೋವರ‍್ಸ್, ರೇಂಜರ‍್ಸ್‌ಗಳು ದಳನಾಯಕರೊಂದಿಗೆ ಶಿಬಿರದಲ್ಲಿ ಭಾಗವಹಿಸಬಹುದು. ಭಾಗವಹಿಸುವವರು ರಾಜ್ಯ ಸಂಸ್ಥೆಗೆ ಅ.20ರ ಒಳಗೆ ಒಪ್ಪಿಗೆ ತಿಳಿಸಿದವರು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ತಿಳಿಸದೇ ಇದ್ದಲ್ಲಿ ನೇರವಾಗಿ ಶಿಬಿರಕ್ಕೆ ಭಾಗವಹಿಸುವವರನ್ನು ಪರಿಗಣಿಸಲಾಗುವುದಿಲ್ಲ ಎಂದು ಸಂಸ್ಥೆಯ ರಾಜ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here