ವಿಶ್ವ ತುಳು ಲಿಪಿ ದಿನದ ಅಂಗವಾಗಿ ಲಿಪಿ ಕಾರ್ಯಗಾರ

0

ಪುತ್ತೂರು : ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಆಡಳಿತ ಸಮಿತಿ ಬೂಡು ಬೆಳ್ಳಾರೆ ಮತ್ತು ಜೈ ತುಳುನಾಡು ಇದರ ಸಹಭಾಗಿತ್ವದಲ್ಲಿ , ವಿಶ್ವ ತುಳು ಲಿಪಿ ದಿನ ಇದರ ಅಂಗವಾಗಿ ನಡೆದ ʼಬಲೆ ತುಳು ಕಲ್ಪುಗʼ ಕಾರ್ಯಕ್ರಮವು ಅ.11ರಂದು ಮೊಗೇರ್ಕಳ ಗರಡಿ ಬೂಡುವಿನಲ್ಲಿ ನಡೆಯಿತು.

ಬೆಳ್ಳಾರೆ ಪ್ರಾಥಾಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ ಭಟ್ ಕುರುಂಬುಡೇಲು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಚೋಮ ಪಾಟಾಜೆ ದುಡಿ ಬಡಿದರು. ಮಾಯಿಲು ಪುಡ್ಕಜೆ ಪಾಡ್ದನ ಹಾಡಿದರು. ಮಂಗಳೂರು ಬಿ.ಇ.ಎಂ ಕಾಲೇಜಿನ ಉಪನ್ಯಾಸಕ ಐತ್ತಪ್ಪ ಅಲೆಕ್ಕಾಡಿ ಅಕ್ಕಿಯ ಮೇಲೆ ತುಲು ಲಿಪಿಯಲ್ಲಿ ಓಂ ಬರೆಯುವ ಮೂಲಕ ತುಳು ಅಕ್ಷರಭ್ಯಾಸಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮೊಗೇರ ಸಂಘ ಸುಳ್ಯ ತಾಲೂಕು ಅಧ್ಯಕ್ಷ ಕರುಣಾಕರ ಪಲ್ಲತ್ತಡ್ಕ, ಜೈ ತುಳುನಾಡು (ರಿ.) ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಕೇಶ್ ಗೌಡ ಕೆಮ್ಮಾಯಿ, ಜೈ ತುಳುನಾಡು (ರಿ.) ಲೇಲೇಲೇಗ ಸಾಂಸ್ಕೃತಿಕ ಕೂಟದ ಅಧ್ಯಕ್ಷೆ ಪೂರ್ಣಿಮಾ ಬಂಟ್ವಾಳ, ಜೈ ತುಳುನಾಡು (ರಿ.) ಬಂಟ್ವಾಳ ಘಟಕದ ಅಧ್ಯಕ್ಷ ಕಿಶೋರ್ ಪೂಜಾರಿ ಮುಂಡ್ಲಿ ಭಾಗವಹಿಸಿ ಶುಭ ಹಾರೈಸಿದರು.ಮೊಗೇರ್ಕಳ ಗರಡಿ ಬೂಡುವಿನಲ್ಲಿ ತುಳು ಲಿಪಿ ಕಲಿಯುವ ಕಾರ್ಯಕ್ರಮ ನಡೆಸಲು ಶ್ರಮಿಸಿದ ಚಿತ್ರಾಕ್ಷಿ ಮೊಗೇರ ತೆಗ್ಗು ಅವರನ್ನು ಆರ್.ಕೆ. ಭಟ್ ಕುರುಂಬುಡೇಲು ಸನ್ಮಾನಿಸಿದರು.

ಆಡಳಿತ ಸಮಿತಿ ಅಧ್ಯಕ್ಷ ವಿಜಯ್ ಪಾಟಾಜೆ ಸ್ವಾಗತಿಸಿದರು. ಚೈತ್ರ ಪುಡ್ಕಜೆ (ಪ್ರಥಮ ದರ್ಜೆ ಕಾಲೇಜು, ಬೆಳಂದೂರು) ವಂದಿಸಿದರು. ಜೈ ತುಳುನಾಡು (ರಿ.) ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಚಿತ್ರಾಕ್ಷಿ ಮೊಗೇರ ತೆಗ್ಗು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಅಧಿಕಾರಿ ನಾರಾಯಣ ಹೈಂದಗೂರು, ಮೊಗೇರ್ಕಳ ದೈವಸ್ಥಾನ ಬೂಡು ಗೌರವ ಸಲಹೆಗಾರ ಜನಾರ್ಧನ ಕಲ್ಲೋಣಿ, ಮೊಗೇರ್ಕಳ ದೈವಸ್ಥಾನದ ಆಡಳಿತ ಸಮಿತಿಯ ಎಲ್ಲ ಪದಾಧಿಕಾರಿಗಳು, ಊರಿನ ಹಿರಿಯರು, ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ಜೈ ತುಳುನಾಡು ಸಂಘಟನೆಯವರು ತುಳು ಲಿಪಿ ತರಬೇತಿ ನೀಡಿದರು. ಸುಮಾರು 35 ಮಕ್ಕಳು ತರಬೇತಿ ಪಡೆಯಲಿದ್ದಾರೆ. ಭವಿತ್ ಬೂಡು ಮಧುರ ಕೊಳಲು ವಾದನದೊಂದಿಗೆ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here