







ಬಡಗನ್ನೂರುಃ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5ಲಕ್ಷ ರೂಪಾಯಿ ಅನುದಾನ ಮಂಜೂರುಗೊಂಡಿದ್ದು ಅ.8 ರಂದು ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.


ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಹಾಗೂ ತಾಲೂಕು ಜನಜಾಗೃತಿ ಮಾಜಿ ಅಧ್ಯಕ್ಷ ಮಹಾಬಲ ರೈ ರವರುಗಳು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದರು.




ಕಾರ್ಯಕ್ರಮದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಂಜುನಾಥ ರೖೆ ಸಾಂತ್ಯ ಪವಿತ್ರ ಪಾಣಿ ಗೋಪಾಲಕೃಷ್ಣ ಕುಂಜತ್ತಾಯ, ಪದಾಧಿಕಾರಿಗಳಾದ ರಾಮ್ ಪ್ರಸಾದ್ ಆಳ್ವ, ಆನಂದ ರೖೆ ಸಾಂತ್ಯ, ಪೂರ್ಣಚಂದ್ರ ನೆಲ್ಲಿತ್ತಡ್ಕ, ಸವಿತಾ ನೆಲ್ಲಿತ್ತಡ್ಕ, ಪ್ರವೀಣ್ ಮೇನಾಲ, ಮೊಹನಾಂಗಿ ಕತ್ತಿಬೖೆಲು, ಸವಿತಾ ನೆಲ್ಲಿತ್ತಡ್ಕ, ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಮಣಿಲತ್ತಾಯ, ನಾಗಪ್ಪ ಗೌಡ ಬೊಮ್ಮೆಟ್ಟಿ, ಮೋಹನ್ ದಾಸ್ ನೂಜಿಬೖೆಲು ಗಿರೀಶ್ ರೖೆ ಮರಕಡ , ಸದಾಶಿವ ರೖೆ ನಡುಬೖೆಲು, ರಮಾನಂದ ಕೊರಿಗದ್ದೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮ ಮೇನಾಲ , ಜನಜಾಗೃತಿ ವಲಯ ಮಾಜಿ ಅಧ್ಯಕ್ಷರಾದ ವಿಕ್ರಮ್ ರೈ ಸಾಂತ್ಯ, ದಿನೇಶ್ ರೖೆ ಕುತ್ಯಾಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಪ್ರಣೀತಾ , ಈಶ್ವರಮಂಗಲ ಒಕ್ಕೂಟದ ಅಧ್ಯಕ್ಷೆ ರೋಹಿಣಿ, ಮೇನಾಲ ಒಕ್ಕೂಟದ ಅಧ್ಯಕ್ಷ ಶೀನಪ್ಪ ನಾಯ್ಕ, ಹಾಗೂ ಸೇವಾ ಪ್ರತಿನಿಧಿ ಸುಂದರ ಜಿ, ಒಕ್ಕೂಟ , ಪದಾಧಿಕಾರಿಗಳು, ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಗೌರವಾರ್ಪಣೆ
ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ , ತಾಲೂಕು ಜನಜಾಗೃತಿ ಮಾಜಿ ಅಧ್ಯಕ್ಷ ಮಹಾಬಲ ರೈ ಗೆಣಸಿನಕುಮೇರು ಹಾಗೂ ವಲಯ ಮೇಲ್ವಿಚಾರಕಿ ಪ್ರಣೀತಾ ಇವರನ್ನು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ವತಿಯಿಂದ ನಾಗಪ್ಪ ಗೌಡ ಬೊಮ್ಮೆಟ್ಟಿ ಶಾಲು ಹಾಕಿ ದೇವರ ಪ್ರಸಾದ ನೀಡಿ ಗೌರವಿಸಿದರು.










