ಕೊಳ್ತಿಗೆ : ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕಾ ಶಿಬಿರ

0

ಪುತ್ತೂರು : ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ದ.ಕ. ,ಪಶು ಚಿಕಿತ್ಸಾಲಯ ಕೊಳ್ತಿಗೆ ಮತ್ತು ಕೊಳ್ತಿಗೆ ಗ್ರಾಮ ಪಂಚಾಯತ್ ವತಿಯಿಂದ ನಾಯಿಗಳಿಗೆ ಉಚಿತ ರೇಬಿಸ್ ನಿರೋಧಕ ಲಸಿಕೆ ಹಾಗೂ ಜಾಗೃತಿ ಶಿಬಿರ ನಡೆಯಿತು.

ಶಿಬಿರವು ಕೊಳ್ತಿಗೆ ಗ್ರಾ.ಪಂ.ವಠಾರ,ಕುದ್ಕುಳಿ ,ಕಟ್ಟತ್ತಾರು,ಸಿದ್ದಮೂಲೆ ಬಸ್ ತಂಗುದಾಣ,ಮಾಲೆತ್ತೋಡಿ ಶಾಲಾ ಬಳಿ,ಕೊರ್ಬಂಡ್ಕ ದೊಡ್ಡಮನೆ ಬಳಿ,ಕೊರ್ಬಂಡ್ಕ ಶಾಲಾ ಬಳಿ,ಉಬರಾಜೆ ಜಂಕ್ಷನ್, ದುಗ್ಗಳ,ಕಲ್ಲರ್ಪೆ,ಚಾಳೆಪಡ್ಪು ಬಸ್ ತಂಗುದಾಣ ಬಳಿ,ಕುಂಟಿಕಾನ ಶಾಲಾ ಬಳಿ,ಕಂಟ್ರಮಜಲು ಶಾಲಾ ಬಳಿ, ಪಟ್ಲ ಜಂಕ್ಷನ್,ಉರುಂಬಿ ಜಂಕ್ಷನ್, ಕರಾಯ ಕಾಲನಿ ಬಳಿ,ಪೆರ್ಲಂಪಾಡಿ ದೊಡ್ಡಮನೆ ಬಳಿ,ಅಮಳ‌ ಜಂಕ್ಷನ್ ,ಎಕ್ಕಡ್ಕ ಶಾಲಾ ಬಳಿ,ಪಾಂಬಾರು ಸತ್ಯಪೀಠ ಬಳಿ,ಪಾಂಬಾರು ಸಿ.ಆರ್.ಸಿ‌.ಕಾಲನಿ ಬಳಿ,ಮೊಗಪ್ಪೆ ಬಸ್ ನಿಲ್ದಾಣದ ಬಳಿ, ಮಣಿಕ್ಕಾರ ಕಾಲನಿ ಬಳಿ,ನಳೀಲು ಸುಬ್ರಹ್ಮಣ್ಯ ದೇವಾಲಯದ ಬಳಿ ಶಿಬಿರ ನಡೆಯಿತು.

ಶಿಬಿರದಲ್ಲಿ 284ನಾಯಿಗಳಿಗೆ ಹಾಗೂ 11ಬೆಕ್ಕುಗಳಿಗೆ ಲಸಿಕೆ ನೀಡಲಾಗಿದೆ.

ಪಶುಇಲಾಖೆಯ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಬಸವರಾಜ್, ಕಿರಿಯ ಪಶುವೈದ್ಯಕೀಯ ಪರೀಕ್ಷಕ ರೋಹಿತ್ ಕೆದಂಬಾಡಿ, ಹೊರಗುತ್ತಿಗೆ ನೌಕರರಾದ ಸರೋಜ, ಈಶ್ವರಮಂಗಲ, ಅರುಣಾ ಕೆದಂಬಾಡಿ,ಸುನಿಲ್ ಕೊಳ್ತಿಗೆ , ಪ್ರದೀಪ್ ಪಾಣಾಜೆ ನಿವೃತ್ತ ಪಶುಪರೀಕ್ಷಕ ಕುಮಾರ್ ಭಾಗವಹಿಸಿದ್ದರು.ಕೊಳ್ತಿಗೆ ಗ್ರಾಮ ಪಂಚಾಯತ್ ಸಿಬ್ಬಂದಿ ಪಿ ಡಿ ಓ, ಕಾರ್ಯದರ್ಶಿಗಳು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here