







ಪುತ್ತೂರು: ನೆಕ್ಕಿಲಾಡಿ ಜಂಕ್ಷನ್ನಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ಸ್ಕೂಟರ್ ಸವಾರ ಗಾಯಗೊಂಡಿರುವ ಘಟನೆ ಅ.11ರಂದು ನಡೆದಿದೆ.


ಬೆಡಗಬೆಳ್ಳೂರು ಗ್ರಾಮದ ಸಂಪತ್ ಮನೆ ನಿವಾಸಿ ಸುದೀರ್ ಎಸ್ ಪೂಂಜಾ (47) ಅವರು ಕುಟುಂಬದೊಂದಿಗೆ KA-19-MS-6305 ನೋಂದಣಿ ಸಂಖ್ಯೆಯ ಕಾರಿನಲ್ಲಿ ಉಪ್ಪಿನಂಗಡಿ ಕಡೆಯಿಂದ ಬಿ.ಸಿ. ರೋಡ್ ಕಡೆಗೆ ಹೋಗುತ್ತಿದ್ದರು.



ಅದೇ ವೇಳೆ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ KA-21-EA-4742 ನೋಂದಣಿ ಸಂಖ್ಯೆಯ ಸ್ಕೂಟರ್ನಲ್ಲಿ ಬರುತ್ತಿದ್ದ ಅನಂತ ಶೆಣೈ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ನೆಕ್ಕಿಲಾಡಿ ಜಂಕ್ಷನ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಡೆಗೆ ತಿರುಗಿದ ಪರಿಣಾಮ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದಲ್ಲಿ ಸ್ಕೂಟರ್ ಸವಾರ ರಸ್ತೆಗೆ ಬಿದ್ದು ದೇಹದ ವಿವಿಧೆಡೆ ಗಾಯಗೊಂಡಿದ್ದು, ಅವರನ್ನು ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ 149/2026 ಕಲಂ 281, 125(a) BNS ಅಡಿ ಪ್ರಕರಣ ದಾಖಲಾಗಿದೆ.










