ಅಳಕೆಮಜಲು ಶ್ರೀ‌ ಶಾರದಾಂಭ ಭಜನಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

0

ಅ.17 : ಮೂರ್ತಿ ಪ್ರತಿಷ್ಠೆ

ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ‌ ಶಾರದಾಂಭ ಭಜನಾಮಂದಿರದಲ್ಲಿ 44ನೇ ವರ್ಷದ ನವರಾತ್ರಿ ಮತ್ತು ಶಾರದೋತ್ಸವದ ಪ್ರಯುಕ್ತ ಅ15 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು‌.ಭಜನಾಮಂಡಳಿಯ ಗೌರವ ಸಲಹೆಗಾರರಾದ ರಾಜಾರಾಮ ಶೆಟ್ಟಿ ಕೊಲ್ಪೆಗುತ್ತು. ಅಧ್ಯಕ್ಷರಾದ ಕೃಷ್ಣ ಕಿಶೋರ್ ಭಟ್ ಪೆಲತ್ತಿಂಜ, ಶ್ರೀ ಶಾರದಾಂಭ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಜಗದೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಅ.17 : ಮೂರ್ತಿ ಪ್ರತಿಷ್ಠೆ:
ಅ.17ರಂದು ಬೆಳಗ್ಗೆ ಗಣಪತಿ ಹವನ ನಡೆಯಲಿದೆ.ಬಳಿಕ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾಸಮಿತಿ ಅಧ್ಯಕ್ಷರಾದ ಪ್ರಕಾಶ್ ಕೆ.ಎಸ್. ಉರಿಮಜಲು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ವೇ. ಮೂ. ಶ್ರೀಧರ ಭಟ್ ಕಬಕ ರವರ ಪೌರೋಹಿತ್ಯದಲ್ಲಿ ಮೂರ್ತಿ ಪ್ರತಿಷ್ಠೆ ನಡೆಯಲಿದೆ. ಬಳಿಕ ಪೂಜಾ ಸೇವೆಗಳು ಆರಂಭಗೊಂಡು ತೆನೆವಿತರಣೆ, ಮಕ್ಕಳಿಗೆ ಅಕ್ಷರಾಭ್ಯಾಸ ನಡೆದು ಭಜನೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ‌ ನಡೆಯಲಿದೆ. ರಾತ್ರಿ ರಂಗಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷ ತೆಲಿಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ‌.

LEAVE A REPLY

Please enter your comment!
Please enter your name here