ಕುಂಬ್ರ: ಕೆಐಸಿ ಬಳಿ ಕಾಂಕ್ರೀಟ್ ರಸ್ತೆಯಲ್ಲಿ ಕೆಸರು ಮಣ್ಣು : ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ತೀವ್ರ ಸಂಕಟ!

0

ಪುತ್ತೂರು: ಒಳಮೊಗ್ರು ಗ್ರಾಮದ ರಾಜಮಾಡ – ಬೊಳ್ಳಾಡಿಗೆ ಹೋಗುವ ರಸ್ತೆಯ ಕೆಐಸಿ (KIC) ಸಮೀಪ ಕಾಂಕ್ರೀಟ್ ರಸ್ತೆಯ ಮೇಲೆ ಅಪಾರ ಪ್ರಮಾಣದ ಕೆಸರು ಮಣ್ಣು ತುಂಬಿಕೊಂಡಿದ್ದು, ಸಂಚಾರ ಸಂಪೂರ್ಣ ದುಸ್ತರವಾಗಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.


​ಕಾಂಕ್ರೀಟ್ ರಸ್ತೆಯ ಮೇಲೆಯೇ ಕೆಸರು ಮಣ್ಣು ಆವರಿಸಿಕೊಂಡಿರುವುದರಿಂದ ವಾಹನಗಳು ಜಾರಿ ಬೀಳುವ ಅಪಾಯ ಎದುರಾಗಿದೆ. ಈಗಾಗಲೇ ಹಲವಾರು ದ್ವಿಚಕ್ರ ವಾಹನ ಸವಾರರು ಇಲ್ಲಿ ಜಾರಿ ಬಿದ್ದಿದ್ದಾರೆ. ಪಾದಚಾರಿಗಳಿಗಂತೂ ಕಾಲಿಡಲೂ ಜಾಗವಿಲ್ಲದಂತೆ ಕೆಸರು ತುಂಬಿದ್ದು, ನಿತ್ಯ ಸಂಚಾರ ನರಕಯಾತನೆಯಾಗಿ ಪರಿಣಮಿಸಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಒಳಮೊಗ್ರು ಗ್ರಾಮ ಪಂಚಾಯತ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯಲ್ಲಿ ಶೇಖರಣೆಯಾಗಿರುವ ಕೆಸರು ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
​

LEAVE A REPLY

Please enter your comment!
Please enter your name here