







ಪುತ್ತೂರು: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ ಜಮಾಅತ್ ಕಮಿಟಿಯ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿ.ಎಚ್ ಅಬ್ದುಲ್ ಶಕೂರ್ ಹಾಜಿ ಆಯ್ಕೆಯಾಗಿದ್ದಾರೆ. ರೆಂಜಲಾಡಿ ಮದರಸ ಸಭಾಂಗಣದಲ್ಲಿ ನಡೆದ ಜಮಾಅತ್ ಕಮಿಟಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಾಧ್ಯಕ್ಷರಾಗಿ ಇಬ್ರಾಹಿಂ ಕಡ್ಯ, ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿ ಝೈನುದ್ದೀನ್ ಹಾಜಿ ಜೆ.ಎಸ್ ಹಾಗೂ ಅಬ್ದುಲ್ ನಾಸಿರ್ ರೆಂಜಲಾಡಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಕಲ್ಪಣೆ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಇಮ್ರಾನ್ ಮಲ್ನಾಡ್, ಕೆ.ಎಂ ಹನೀಫ್ ರೆಂಜಲಾಡಿ, ಉಮ್ಮರ್ ಸುಲ್ತಾನ್ ರೆಂಜಲಾಡಿ ಹಾಗೂ ಅಬ್ದುಲ್ ರಹಿಮಾನ್ ಹಾಜಿ ಪರಾಡ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹೀಂ ರೆಂಜಲಾಡಿ ಆಯ್ಕೆಯಾಗಿದ್ದಾರೆ.
ಸಮಿತಿಯ ನಿರ್ದೇಶಕರಾಗಿ ಆರ್.ಎಂ ಅಲಿ ಹಾಜಿ ರೆಂಜಲಾಡಿ, ಅಬ್ಬಾಸ್ ಮುಸ್ಲಿಯಾರ್ ಕಟ್ಟತ್ತಡ್ಕ, ಅಬ್ದುಲ್ ಅಝೀಝ್ ರೆಂಜಲಾಡಿ, ಆಸಿಫ್ ರೆಂಜಲಾಡಿ, ಅಮೀರ್ ರೆಂಜಲಾಡಿ, ಇಸ್ಮಾಯಿಲ್ ಕಟ್ಟತ್ತಡ್ಕ ಆಯ್ಕೆಯಾದರು. ರೆಂಜಲಾಡಿ ಮಸೀದಿಯ ಖತೀಬ್ ನಾಸಿರ್ ಫೈಝಿ ಕುಂತೂರು ಪ್ರಾರ್ಥನೆ ನೆರವೇರಿಸಿದರು. ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಜಮಾಅತರು ಉಪಸ್ಥಿತರಿದ್ದರು.












