ಪಿಲಿಗೊಬ್ಬು ಸೀಸನ್ -4 ಇದರ ಫಲಿತಾಂಶ

0

ಪುತ್ತೂರು: ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು ಸಮಾಜಮುಖಿ ಸೇವೆ ಮಾಡುತ್ತಿರುವ ಪುತ್ತೂರಿನ ವಿಜಯ ಸಾಮ್ರಾಟ್ ನೇತೃತ್ವದದಲ್ಲಿ ಅ.17ರಂದು ಪುತ್ತೂರುದ ಪಿಲಿಗೊಬ್ಬು ಸೀಸನ್ -4 ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಿತು.

ಹನುಮಾನ್ ಟೈಗರ್ಸ್ ಉಪ್ಪಳ ಪ್ರಥಮ ಮಹಾಕಾಳಿ ಟೈಗರ್ಸ್ ತುಮಿನಾಡು ದ್ವಿತೀಯ
‘ಪುತ್ತೂರುದ ಪಿಲಿಗೊಬ್ಬು-ಸೀಸನ್ 4’ ಸ್ಪರ್ಧಾ ಕಾರ್ಯಕ್ರಮದಲ್ಲಿ ಹನುಮಾನ್ ಟೈಗರ್ಸ್ ಉಪ್ಪಳ ತಂಡ ಸಮಗ್ರ ಪ್ರಶಸ್ತಿಯೊಂದಿಗೆ ಪ್ರಥಮ ಬಹುಮಾನ ಪಡೆಯುವ ಮೂಲಕ ರೂ.4 ಲಕ್ಷ ನಗದು ಶಾಶ್ವತ ಫಲಕವನ್ನು ತನ್ನದಾಗಿಸಿಕೊಂಡಿದೆ.ದ್ವಿತೀಯ ಬಹುಮಾನ ರೂ.3 ಲಕ್ಷ ನಗದು ಮತ್ತು ಶಾಶ್ವತ ಫಲಕವನ್ನು ಮಹಾಕಾಳಿ ಟೈಗರ್ಸ್ ತುಮಿನಾಡು, ತೃತೀಯ ಬಹುಮಾನವಾಗಿ ರೂ.2 ಲಕ್ಷ ನಗದು ಮತ್ತು ಶಾಶ್ವತ ” ಫಲಕವನ್ನು ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ ತಂಡ ಪಡೆದುಕೊಂಡಿದೆ.

ಮರಿ ಹುಲಿಯಾಗಿ ಹನುಮಾನ್ ಟೈಗರ್ಸ್ ಉಪ್ಪಳದ ಶೌರ್ಯ, ಕಪ್ಪು ಹುಲಿಯಾಗಿ ಟ್ಯಾಲೆಂಟ್ ಟೈಗರ್ಸ್, ಮುಡಿ ಅಕ್ಕಿ ಹೊಡೆದ ಹುಲಿ ವೀರನಾಗಿ ಹನುಮಾನ್ ಟೈಗರ್ ಉಪ್ಪಳದ ಉಪ್ಪಳದ ವೈಶಾಕ್, ನಾಣ್ಯ ತೆಗೆದ ಪ್ರವೀಣನಾಗಿ ಎಮ್ಮೆಕೆರೆ ಫ್ರೆಂಡ್ಸ್‌ ಸರ್ಕಲ್‌ನ ಸರ್ಕಲ್‌ನ ಪ್ರದ್ವಿನ್,ಅಪ್ಪೆ ಪಿಲಿಯಾಗಿ ಫ್ರೆಂಡ್ಸ್ ಅಂಗರಗುಡ್ಡೆ, ಪುತ್ತೂರುದ ಹುಲಿಯಾಗಿ ಮಹಾಕಾಳಿ ಟೈಗರ್ಸ್ ತುಮಿನಾಡು ತಂಡದ ಮೇಹುಲ್ ಹಾಗೂ ಶಿಸ್ತಿನ ತಂಡ ಪ್ರಶಸ್ತಿಯನ್ನು ಮುರಳಿ ಬ್ರದರ್ಸ್ ಪುತ್ತೂರು ಪಡೆದುಕೊಂಡರು.


ವಿಶೇಷ ಬಹುಮಾನ:
ಹುಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಫ್ರೆಂಡ್ಸ್ ಅಂಗರಗುಡ್ಡೆಯ 7 ತಿಂಗಳ ಮಗು ಪ್ರೀತಮ್ ಅವರಿಗೆ ಸಹಜ್ ರೈ ಅವರು ವಿಶೇಷ ಬಹುಮಾನವಾಗಿ ರೂ.5 ಸಾವಿರ ನಗದು ನೀಡಿ ಗೌರವಿಸಿದರು.ಭಾಗಿಯಾದ ಎಲ್ಲಾ ತಂಡಗಳಿಗೆ ತಲಾ 60,000 ಗೌರವ ಸಂಭಾವನೆಯನ್ನು ತಂಡದ ಪ್ರದರ್ಶನದ ವೇಳೆ ನೀಡಿ ಗೌರವಿಸಲಾಗಿತ್ತು. ವಿಜೇತರಿಗೆ ಸಹಜ್ ರೈ ಬಹುಮಾನ ವಿತರಿಸಿದರು.

LEAVE A REPLY

Please enter your comment!
Please enter your name here