







ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಕನ್ನಡ ಸ್ಪರ್ಧೆ


ಪುತ್ತೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಿ.ಪ್ರಕಾಶ್ ಪುರುಷರಕಟ್ಟೆ ಸ್ಮರಣಾರ್ಥ ಟೈ ಬ್ರೇಕರ್ಸ್ ಯುವಕ ವೃಂದ ಪುರುಷರಕಟ್ಟೆ ಇದರ ವತಿಯಿಂದ ನ.1ರಂದು ಪುರುಷರಕಟ್ಟೆಯ ಶ್ರೀ ಮಹಾಲಿಂಗೇಶ್ವರ ಕಟ್ಟೆಯ ಮುಂಭಾಗದಲ್ಲಿ ಎರಡನೇ ವರ್ಷದ ‘ಕನ್ನಡ ಗ್ರಾಮೋತ್ಸವ’ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ವಿವಿಧ ಕನ್ನಡ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.



ನರಿಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಮಕ್ಕಳಿಗೆ ಹಾಗೂ ಪುತ್ತೂರು ತಾಲೂಕು ವ್ಯಾಪ್ತಿಯ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸ್ಪರ್ಧೆಗಳು ನಡೆಯಲಿವೆ. ಸಾರ್ವಜನಿಕರಿಗೂ ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸ್ಪರ್ಧೆಗಳ ವಿವರ:
-ಅಂಗನವಾಡಿ, ಎಲ್‌ಕೆಜಿ ಮತ್ತು ಯುಕೆಜಿ: ಕನ್ನಡ ನಾಡು-ನುಡಿಯ ವೇಷ ಸ್ಪರ್ಧೆ.
-1ರಿಂದ 4ನೇ ತರಗತಿ: ಚಿತ್ರಕಲೆ ಮತ್ತು ಕನ್ನಡ ಪಠ್ಯ ಗಾಯನ.
-5ರಿಂದ 7ನೇ ತರಗತಿ: ಚಿತ್ರಕಲೆ ಮತ್ತು ಕನ್ನಡ ಪಠ್ಯ ಗಾಯನ.
-8ರಿಂದ 10ನೇ ತರಗತಿ: ಚಿತ್ರಕಲೆ, ಕನ್ನಡ ಪಠ್ಯ ಗಾಯನ ಹಾಗೂ ‘ನಾನು ಓದಿದ ಪುಸ್ತಕ’ ವಿಷಯದ ಕುರಿತು ಬರವಣಿಗೆ ಸ್ಪರ್ಧೆ.
-ಪದವಿಪೂರ್ವ ವಿಭಾಗ: ಚಿತ್ರಕಲೆ, ಕನ್ನಡ ಪಠ್ಯ ಗಾಯನ ಹಾಗೂ ‘ನಾನು ಓದಿದ ಪುಸ್ತಕ’ ವಿಷಯದ ಕುರಿತು ಬರವಣಿಗೆ ಸ್ಪರ್ಧೆ.
-ಸಾರ್ವಜನಿಕರಿಗೆ: ಮುಕ್ತ ಕನ್ನಡ ರಸಪ್ರಶ್ನೆ ಸ್ಪರ್ಧೆ.
ಎಲ್ಲಾ ಸ್ಪರ್ಧೆಗಳು ವೈಯಕ್ತಿಕ ವಿಭಾಗದಲ್ಲಿ ನಡೆಯಲಿದ್ದು, ಒಂದು ಶಾಲೆಯಿಂದ ಪ್ರತಿ ವಿಭಾಗಕ್ಕೆ ಗರಿಷ್ಠ ಮೂವರು ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಐದು ಸ್ಪರ್ಧಾಳುಗಳನ್ನು ಆಯ್ಕೆ ಮಾಡಿ ಶಾಸಕರ ಸಮ್ಮುಖದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರದ ಜೊತೆಗೆ ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಅ. 25ರೊಳಗೆ ನೋಂದಣಿ ಕಡ್ಡಾಯ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರು, ಕಲಿಯುತ್ತಿರುವ ತರಗತಿ, ಶಾಲೆಯ ಹೆಸರು ಹಾಗೂ ಭಾಗವಹಿಸಲಿರುವ ಸ್ಪರ್ಧೆಯ ವಿವರಗಳನ್ನು ಅಕ್ಟೋಬರ್ 25ರೊಳಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ ನೋಂದಾಯಿಸಿಕೊಳ್ಳಬೇಕು ಎಂದು ಟೈ ಬ್ರೇಕರ್ಸ್ ಯುವಕ ವೃಂದದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೋಂದಣಿ ಹಾಗೂ ಸಂಪರ್ಕ: 9481180853










