







ಸವಣೂರು: ಶ್ರೀ ಆದಿಶಕ್ತಿ ಭಜನಾ ಮಂಡಳಿ ಪೆರಿಯಡ್ಕ ಹಾಗೂ ಶ್ರೀ ಆದಿಶಕ್ತಿ ಉತ್ಸವ ಸಮಿತಿ ಪೆರಿಯಡ್ಕ ಸವಣೂರು ಇದರ ವತಿಯಿಂದ 520ಕೆ.ಜಿ.ಯ 7 ಜನ ಪುರುಷರ, 470 ಕೆ.ಜಿ.ಯ 7 ಜನ ಮಹಿಳೆಯರ ಲೆವೆಲ್ ಮಾದರಿಯ 8ನೇ ವರ್ಷದ ಮುಕ್ತ ಹಗ್ಗ ಜಗ್ಗಾಟ ಅ.20ರಂದು ಪೆರಿಯಡ್ಕ ಬಸ್ ತಂಗುದಾಣದ ಬಳಿ ನಡೆಯಲಿದೆ.


ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು,ಸಂಜೆ ವಿಶೇಷ ದೋಸೆ ಹಬ್ಬ ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.












