







ಉಪ್ಪಿನಂಗಡಿ: ಕಾರನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದೂರುದಾರ ರೋಲ್ಸನ್ ನೀಲ್ ಲುವಿನ್ (29, ಮಂಚಿ ಗ್ರಾಮ, ಬಂಟ್ವಾಳ, ಹಾಲಿ ನೆಕ್ಕಿಲಾಡಿ) ಅವರು ದೂರು ನೀಡಿದ್ದು, ಅ.21ರಂದು ಮಧ್ಯಾಹ್ನ 1.30ಕ್ಕೆ ಕಾರಿನಲ್ಲಿ ತಾನು ಡಾ. ಸುಪ್ರಿತ್ ಲೋಬೋ ಅವರನ್ನು ಉಪ್ಪಿನಂಗಡಿಯ ನರ್ಸಿಂಗ್ ಹೋಂನಿಂದ ಕರೆದುಕೊಂಡು ಹೋಗುತ್ತಿದ್ದ ವೇಳೆ, NH-75ರಲ್ಲಿ ಎದುರು ಹಿಂದಿನಿಂದ ಬಂದ ಕಾರಿನ ಚಾಲಕ ಅಜಾಗರೂಕತೆಯಿಂದ ಬಂದು ಹಾರ್ನ್ ಮಾಡಿದ್ದಾನೆ. ಆಗ ನಿಧಾನವಾಗಿ ಬರಲು ಆತನಿಗೆ ಕೈ ಸನ್ನೆ ಮಾಡಿದ್ದು, ಅದಕ್ಕೆ ಆತ ಕಾರನ್ನು ಅಡ್ಡಗಟ್ಟಿ ಕಾಲರ್ ಹಿಡಿದು ಮುಖಕ್ಕೆ ಮುಷ್ಟಿಯಿಂದ ಹೊಡೆದು, ಕಾಲಿನಿಂದ ತುಳಿದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆತ ಹಲ್ಲೆ ನಡೆಸುತ್ತಿದ್ದಾಗ ರಾಜೇಶ್ ಮತ್ತು ಸಂದೀಪ್ ಬಂದು ಜಗಳ ಬಿಡಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ. 137/2026, BNS ಕಲಂ 126(2), 115(2)ರಂತೆ ಪ್ರಕರಣ ದಾಖಲಾಗಿದೆ.













