







ಕಡಬ: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಸ್ಕೂಟಿ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅ.19ರಂದು ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆಯಲ್ಲಿ ನಡೆದಿದೆ.


ಕುಂತೂರು ಗ್ರಾಮದ ಬೀರಂತಡ್ಕ ನಿವಾಸಿ ಬಿ.ರಘುನಾಥ ನಾಯ್ಕ್(61ವ.)ಗಾಯಗೊಂಡವರು. ಇವರು ಅ.19ರಂದು ಬೆಳಗ್ಗೆ ಆಲಂಕಾರಿಗೆ ಬಂದವರು ಕೆಲಸ ಮುಗಿಸಿಕೊಂಡು ಮಧ್ಯಾಹ್ನ 12 ಗಂಟೆ ವೇಳೆಗೆ ಆಲಂಕಾರಿನಲ್ಲಿ ಕೃಪಾ ಬೇಕರಿ ಎದುರುಗಡೆ ರಸ್ತೆ ದಾಟುತ್ತಿರುವ ಸಮಯ ಸೌಮ್ಯ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ (ಕೆಎ 21, ವೈ 1491) ಡಿಕ್ಕಿಯಾಗಿದೆ. ಗಾಯಗೊಂಡಿರುವ ರಘುನಾಥ ನಾಯ್ಕ್ರನ್ನು ಸ್ಥಳೀಯರು ಉಪಚರಿಸಿ ರಿಕ್ಷಾದಲ್ಲಿ ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಸೂಚಿಸಿದಂತೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಘುನಾಥ ನಾಯ್ಕ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













