









ಕಡಬ: ಸ್ಕೂಟಿ ಪಲ್ಟಿಯಾಗಿ ಮಗು ಗಾಯಗೊಂಡ ಘಟನೆ ಅ.19ರಂದು ರಾತ್ರಿ ಕಡಬ-ಅಲೆಕ್ಕಾಡಿ ರಸ್ತೆಯ ಕೋಡಿಂಬಾಳ ಗ್ರಾಮದ ಪಿಜಕ್ಕಳ ಎಂಬಲ್ಲಿ ನಡೆದಿದೆ.
ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ರಫೀಕ್, ಅವರ ಪತ್ನಿ ಸಾಬಿರ ಎಮ್.ಎಮ್. ಹಾಗೂ ನಾಲ್ಕುವರೇ ವರ್ಷದ ಪುತ್ರಿ ರಿನ್ಸಾ ಫಾತಿಮಾ ಕೆ.ಆರ್. ಅವರು ಹೋಂಡಾ ಕಂಪನಿಯ ಸ್ಕೂಟಿ( ಕೆಎ 21, ಇಇ 1357)ಯಲ್ಲಿ ಅಲೆಕ್ಕಾಡಿಗೆಂದು ಕಡಬ-ಅಲೆಕ್ಕಾಡಿ ರಸ್ತೆಯಲ್ಲಿ ಹೋಗುತ್ತಿದ್ದವರು ಕೋಡಿಂಬಾಳ ಗ್ರಾಮದ ಪಿಜಕ್ಕಳ ಎಂಬಲ್ಲಿಗೆ ತಲುಪುತ್ತಿದ್ದಂತೆ ಸ್ಕೂಟಿ ಸ್ಕಿಡ್ ಆಗಿ ಪಲ್ಟಿಯಾಗಿದ್ದು ಎಲ್ಲರೂ ನೆಲಕ್ಕೆ ಬಿದ್ದಿದ್ದು ಈ ಪೈಕಿ ಮಗು ರಿನ್ಸಾ ಫಾತಿಮಾಗೆ ಗಾಯವಾಗಿದೆ. ರಫೀಕ್ ಅವರಿಗೆ ತರಚಿದ ಗಾಯವಾಗಿದ್ದು, ಅವರ ಪತ್ನಿ ಸಾಬಿರಗೆ ಯಾವುದೇ ಗಾಯಗಳಾಗಿರುವುದಿಲ್ಲ. ಸ್ಕೂಟಿ ಜಖಂಗೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸಾಬಿರ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













