







ಪುತ್ತೂರು: ಸೇಡಿಯಾಪು ಕಜೆ ನಿವಾಸಿ ಸೆಂಟ್ರಿಂಗ್ ಕಾರ್ಮಿಕರೊಬ್ಬರು ಸಾಮೆತ್ತಡ್ಕದ ಮನೆಯೊಂದರಲ್ಲಿ ನಿಧನರಾದ ಬಗ್ಗೆ ಅ.24ರಂದು ವರದಿಯಾಗಿದೆ.


ಸೇಡಿಯಾಪು ಕಜೆ ನಿವಾಸಿ ಲೋಕಪ್ಪ ಕುಲಾಲ್(52ವ)ರವರು ನಿಧನರಾದವರು. ಅವರು ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದು ಇತ್ತೀಚೆಗೆ ಸಾಮೆತ್ತಡ್ಕದಲ್ಲಿ ಮನೆಯೊಂದರಲ್ಲಿ ಕೆಲಸಕ್ಕೆ ಹೋದವರು ಅಲ್ಲೇ ತಂಗಿದ್ದರು. ಅ.23ರಂದು ರಾತ್ರಿ ಮಲಗಿದ್ದ ಅವರು ಬೆಳಗ್ಗೆ ಎದ್ದೇಳದೆ ಇರುವುದನ್ನು ಗಮನಿಸಿದಾಗ ಅವರು ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ.



ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ. ಸೇಡಿಯಾಪು ಕಜೆ ದಿ.ಚಿನ್ಮಯ ಮೂಲ್ಯ ಮತ್ತು ದಿ. ದೇವಕಿ ಅವರ ಪುತ್ರರಾಗಿದ್ದ ಲೋಕಪ್ಪ ಕುಲಾಲ್ ಅವರು ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದು ಕೆಲಸಕ್ಕೆ ಹೋದ ಕಡೆ ತಂಗುತ್ತಿದ್ದರೆನ್ನಲಾಗಿದೆ. ಮೃತರು ಪತ್ನಿ, ಮಕ್ಕಳು, ಮೂವರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಘಟನೆ ಕುರಿತು ಹೆಚ್ಚಿನ ವಿವರ ತಿಳಿದು ಬಂದಿಲ್ಲ.










