ಪುಣ್ಚಪ್ಪಾಡಿ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡಿದ ಚಿಣ್ಣರು,ವಿಶೇಷ ಪುಸ್ತಕ ಪೂಜೆಯೊಂದಿಗೆ ವಿದ್ಯಾರಂಭ

0

ಪುತ್ತೂರು: ಈ ಶಾಲೆಯ ಪುಸ್ತಕ ಪೂಜೆಗೆ 99 ವರ್ಷಗಳ ಇತಿಹಾಸವಿದೆ….   ಈ ಶಾಲೆಯ ಪುಸ್ತಕ ಪೂಜೆಯೆಂದರೆ ಶಾಲೆಯ ಹಬ್ಬ ಮಾತ್ರವಲ್ಲ ಊರಿನ ಹಬ್ಬ ಕೂಡ ಹೌದು. ಪುಸ್ತಕ ಪೂಜೆಯ ಹಿಂದಿನ ದಿವಸ ಪೋಷಕರು, ಮಕ್ಕಳು, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಸೇರಿ ಶಾಲೆಯನ್ನು ಸ್ವಚ್ಛಗೊಳಿಸಿ, ಬಾಳೆ, ಮಾವಿನ ತೋರಣ ಕಟ್ಟಿ, ಶಾರದಾ ಮಾತೆಯ ಮಂಟಪ ಸಿಂಗರಿಸುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಕಳೆದ ಹಲವಾರು ವರ್ಷಗಳಿಂದ ವಿಶೇಷವೆಂಬಂತೆ ದಿ.ಪುರಂದರ ರೈ ಪುಣ್ಣಪ್ಪಾಡಿ ಇವರ ಸ್ಮರಣಾರ್ಥ ಇವರ ಮನೆಯವರಾದ ಕುಶಲ ಪಿ. ರೈ ಮತ್ತು ಮಕ್ಕಳು ಸಾರ್ವಜನಿಕ ಸಹಭೋಜನದ ವ್ಯವಸ್ಥೆಯನ್ನು, ರಾಜೀವಿ ರೈ ಪೋಸ್ಟ್ ಮಾಸ್ಟರ್ ಪುಣ್ಚಪ್ಪಾಡಿ, ಚಂದ್ರಕಲಾ ರಮಾನಂದ, ರಮ್ಯಾ ಜನಾರ್ಧನ ಕಟ್ಟತ್ತಾರು, ಈಶ್ವರ ಗೌಡ ತೋಟದಡ್ಕ, ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ ಮತ್ತು ಪೋಷಕರು ಪೂಜಾ ಸಾಮಗ್ರಿಗಳನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಹೆತ್ತವರು ಮಾತ್ರವಲ್ಲದೇ ಹಿರಿಯ ವಿದ್ಯಾರ್ಥಿಗಳು, ಊರಿನ ಅನೇಕರು ಭಾಗವಹಿಸುತ್ತಿರುವುದು ವಿಶೇಷ.

ಈ ವರ್ಷವೂ ಈ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.  ಊರಿನ ಮಕ್ಕಳಿಗೆ ವಿದ್ಯಾರಂಭ  ಮಾಡಿಸಲಾಯಿತು. ಸುಮಾರು 3 ಗಂಟೆಗಳ ಕಾಲ ಹರಿಭಜನಾ ಮಂಡಳಿ  ದೇವಸ್ಯ, ಮಕ್ಕಳು ಮತ್ತು ಪೋಷಕರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಸಹಭೋಜನ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿನಿ ತ್ರಿಶಾ ವಿ.ಜೆ D/o  ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ವಿಜಯ ಕುಚ್ಚೆಜಾಲು  ಇವರು ಸುಮಾರು 5 ಸಾವಿರ ಮೌಲ್ಯದ ನೂತನ ದೇವರ ಮಂಟಪವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪಿ. ಡಿ ಕೃಷ್ಣ ಕುಮಾರ್ ರೈ ದೇವಸ್ಯ, ಭೋಜನ ವ್ಯವಸ್ಥೆಯನ್ನು ಮಾಡಿದ ಕುಶಲ ಪಿ. ರೈ ಪುಣ್ಚಪ್ಪಾಡಿ, ಸಾಮಾಜಿಕ ಮುಂದಾಳು ಗಿರಿಶಂಕರ ಸುಲಾಯ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ‌ ಜಯಶ್ರೀ ಕುಚ್ಚೆಜಾಲು,ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಹರೀಶ್ ತೋಟತ್ತಡ್ಕ, ವಕೀಲರಾದ ಮಹೇಶ್ ಕೆ ಸವಣೂರು, ಲಿಂಗಪ್ಪ ರೈ ಚೆಂಬುತ್ತೋಡಿ, ಎಸ್. ಡಿ. ಎಂ. ಸಿ ಅಧ್ಯಕ್ಷರಾದ ವಿಜಯ ಕುಚ್ಚೆಜಾಲು, ಉಪಾಧ್ಯಕ್ಷೆ ಯಮುನಾ ಪುಣ್ಚಪ್ಪಾಡಿ , ಎಸ್.ಡಿ.ಎಮ್ .ಸಿ. ಸದಸ್ಯರು, ಶ್ರೀ ಹರಿಭಜನಾ ಮಂಡಳಿಯ ಸದಸ್ಯರು, ಪೋಷಕರು, ಶಿಕ್ಷಕರು,ಅಕ್ಷರ ದಾಸೋಹ ಸಿಬ್ಬಂದಿಗಳು, ಹಿರಿಯ ವಿದ್ಯಾರ್ಥಿಗಳು, ಮಕ್ಕಳು, ಊರವರು ಸೇರಿದಂತೆ 150 ಕ್ಕಿಂತಲೂ ಹೆಚ್ಚು ಜನ ಭಾಗವಹಿಸಿದ್ದರು. ಮುಖ್ಯಗುರುಗಳಾದ  ರಶ್ಮಿತಾ ನರಿಮೊಗರು , ಜಿ ಪಿ ಟಿ ಶಿಕ್ಷಕರಾದ ಶೋಭಾ ಕೆ ಹಾಗೂ ಅತಿಥಿ ಶಿಕ್ಷಕರಾದ ಲೀಲಾವತಿ , ಭವಾನಿ  ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here