ಪುತ್ತೂರು ವಾಣಿಜ್ಯ, ಕೈಗಾರಿಕಾ ಸಂಘದ 46ನೇ ವಾರ್ಷಿಕ ಮಹಾಸಭೆ ಪ್ರಯುಕ್ತ ಕ್ರೀಡಾ ಸಮ್ಮಿಲನ

0

ಪ್ರತಿಯೋರ್ವ ವರ್ತಕರೂ ಸಂಘದ ಬೆಳವಣಿಗೆಯಲ್ಲಿ ಕೈಜೋಡಿಸಿ-ಪದ್ಮನಾಭ ಶೆಟ್ಟಿ

ಪುತ್ತೂರು:ಪುತ್ತೂರು ಪ್ರಧಾನ ರಸ್ತೆಯ ಜಿ.ಎಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 46ನೇ ವಾರ್ಷಿಕ ಮಹಾಸಭೆಯು ಅ.25 ರಂದು ಸಂಜೆ ಮನೀಷಾ ಸಭಾಂಗಣದಲ್ಲಿ ನಡೆಯಲಿದ್ದು, ಈ ಪ್ರಯುಕ್ತ ವರ್ತಕ ಸದಸ್ಯರಿಗೆ ಹಾಗೂ ಅವರ ಕುಟುಂಬಿಕರಿಗೋಸ್ಕರ ಬೆಳಿಗ್ಗೆ ತೆಂಕಿಲ ವಿವೇಕಾನಂದ ಶಾಲೆಯ  ಮೈದಾನದಲ್ಲಿ ನಡಿಗೆ ಸ್ಪರ್ಧೆ, ನಿಗದಿತ ಓವರ್ ಕ್ರಿಕೆಟ್, ಇನ್ನಿತರ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಪ್ರತಿಯೋರ್ವ ವರ್ತಕರೂ ಸಂಘದ ಬೆಳವಣಿಗೆಯಲ್ಲಿ ಕೈಜೋಡಿಸಿ-ಪದ್ಮನಾಭ ಶೆಟ್ಟಿ:
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿಯವರು ಕ್ರೀಡೆಯನ್ನು ಉದ್ಘಾಟಿಸಿ ಮಾತನಾಡಿ, 45 ವರ್ಷದ ಹಿಂದೆ ಹಿರಿಯರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಪ್ರಸ್ತುತ ರವಿಕೃಷ್ಣ ಕಲ್ಲಾಜೆರವರ ಅಧ್ಯಕ್ಷತೆಯಲ್ಲಿ ಎಲ್ಲರ ಸಹಕಾರದಿಂದ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಭಾಗಗಳಲ್ಲಿ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ಯಾವುದೇ ವಿಚಾರದಲ್ಲಿ ವರ್ತಕರ ಹಿತಕ್ಕೆ ಧಕ್ಕೆಯಾಗದಂತೆ ಸೌಹಾರ್ದತೆಯಿಂದ, ಒಗ್ಗಟ್ಟಿನಿಂದ, ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಸ್ಪರ್ಧೆಗಳು ಕೇವಲ ಆಟಕ್ಕೆ ಮಾತ್ರ ಸೀಮಿತವಾಗಬೇಕೇ ವಿನಹ ಜೀವನದಲ್ಲಿ ಅಲ್ಲ. ಪ್ರತಿಯೋರ್ವ ವರ್ತಕರೂ ಸಂಘದ ಬೆಳವಣಿಗೆಯಲ್ಲಿ ಕೈಜೋಡಿಸಬೇಕು ಎಂದರು.

ಪುತ್ತೂರು ವಾಣಿಜ್ಯ, ಕೈಗಾರಿಕಾ ಸಂಘದ ಕಾರ್ಯದರ್ಶಿ ಶಶಿರಾಜ್ ರೈ, ಉಪಾಧ್ಯಕ್ಷ ಮನೋಜ್ ಟಿ.ವಿ, ನಿರ್ದೇಶಕರಾದ ಮುರಳೀ ಎಚ್, ರಾಮಚಂದ್ರ ನಾಯಕ್,  ಮೊಹಮ್ಮದ್ ಸಾಬ್, ನೌಶಾದ್ ಹಾಜಿ ಬೊಳುವಾರು, ಮಾಜಿ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಸದಸ್ಯರಾದ ಶಾಂತಕುಮಾರ್, ದಿನೇಶ್ ಹೆಗ್ಡೆ ಸಹಿತ ಹಲವರು ಉಪಸ್ಥಿತರಿದ್ದರು. ಅಧ್ಯಕ್ಷ ರವಿಕೃಷ್ಣ ಡಿ.ಕಲ್ಲಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪಿ.ಉಲ್ಲಾಸ್ ಪೈ ವಂದಿಸಿದರು.

LEAVE A REPLY

Please enter your comment!
Please enter your name here