







ವಿಟ್ಲ: ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ಬ್ಯಾಗಿನಲ್ಲಿರಿಸಲಾಗಿದ್ದ ಚಿನ್ನಾಭರಣ ಸಹಿತ ಅಗತ್ಯ ದಾಖಲೆಗಳು ಕಳವಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಪ್ರೇಮಾ (44 ವ.) ರವರು ದೂರುದಾರರಾಗಿದ್ದು, ನಾನು ಅ.19ರಂದು ನಾನು ನನ್ನ ಇಬ್ಬರು ಮಕ್ಕಳೊಂದಿಗೆ ಪೆರ್ಲದಲ್ಲಿರುವ ತಾಯಿ ಮನೆಯಿಂದ ವಿಟ್ಲಕ್ಕೆ ಬಂದು ಅಲ್ಲಿಂದ ಮಂಗಳೂರಿಗೆ ತೆರಳುವ ಬಸ್ಸು ಹತ್ತಿ ಕಳಿತ ವೇಳೆ ನನ್ನ ಬಳಿ ಇದ್ದ ಬ್ಯಾಗ್ ತೆರೆದುಕೊಂಡಿರುವುದು ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಬ್ಯಾಗ್ ನೊಳಗೆ ನೋಡಿದಾಗ ಅದರೊಳಗೆ ಇರಿಸಲಾಗಿದ್ದ ಸುಮಾರು 6,20,000 ಲಕ್ಷ ರೂಪಾಯಿ ಮೌಲ್ಯದ 64 ಗ್ರಾಂ ಚಿನ್ನಾಭರಣಗಳು, 3000ರೂ ನಗದು ಹಾಗೂ ಎಟಿಎಂ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿಗಳು ಕಳವಾಗಿತ್ತು ಎಂದು ಅವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













