







ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ-75ರ ಬದಿ ದೇವಾಲಯದ ಬಳಿ ನಿಲ್ಲಿಸಿದ್ದ ಬೈಕ್ ಕಳವಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಸವಾಯಿ ಮಾಧೋಪುರ್ ಜಿಲ್ಲೆಯ ಬಾಮನ್ಬಾಸ್ ತಾಲೂಕಿನ ಅಮರ್ ಸಿಂಗ್ ಖಾರ್ವಾಲ್ (31) ಅವರು ನೀಡಿದ ದೂರಿನಂತೆ, ಅ.20ರಂದು ಸಂಜೆ 6.30ಕ್ಕೆ KA-19-EN-1650 ನಂಬ್ರದ ಬೈಕನ್ನು ಕೀ ಸಮೇತ ದೇವಾಲಯದ ಬಳಿ ನಿಲ್ಲಿಸಿ ಬಾಡಿಗೆ ಮನೆಗೆ ಪೂಜೆಗೆ ತೆರಳಿದ್ದರು. ರಾತ್ರಿ 7.30ಕ್ಕೆ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು.



ಕಳವಾದ ಬೈಕಿನ ಮೌಲ್ಯ ಸುಮಾರು ರೂ.20,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ: 140/2026, ಕಲಂ 303(2) BNS ರಂತೆ ಪ್ರಕರಣ ದಾಖಲಾಗಿದೆ.










