







ರಾಮಕುಂಜ: ಕೊಯಿಲ ಗ್ರಾಮದ ಗಂಡಿಬಾಗಿಲು ಖುತುಬಿಯಾ ಜುಮಾ ಮಸೀದಿ ಅಧೀನದ ದಫನ ಭೂಮಿ ಪ್ರದೇಶಕ್ಕೆ ಗಂಡಿಬಾಗಿಲು ಎಸ್.ಎಂ. ಫ್ರೆಂಡ್ಸ್ ವತಿಯಿಂದ ಹೈಮಾಕ್ಸ್ ಬೆಳಕಿನ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ್ದಾರೆ.


ಮಸೀದಿಯ ದಫನ ಭೂಮಿ ಮಸೀದಿಯ ಹಿಂಭಾಗದಲ್ಲಿದ್ದು ರಾತ್ರಿ ಹೊತ್ತಿನಲ್ಲಿ ಕತ್ತಲಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸಮಸ್ಯೆ ಉಂಟಾಗುತ್ತಿದ್ದುದನ್ನು ಮನಗಂಡ ಎಸ್.ಎಂ. ಫ್ರೆಂಡ್ಸ್ ಸುಮಾರು ೨೫ ಸಾವಿರ ರೂಪಾಯಿ ವೆಚ್ಚದಲ್ಲಿ ಸೋಲಾರ್ ಅವಲಂಭಿತ ಹೈಮಾಕ್ಸ್ ಲೈಟ್ ವ್ಯವಸ್ಥೆಯನ್ನು ಮಾಡಿ ಉದಾರತೆ ತೋರಿದ್ದಾರೆ. ಎಸ್.ಎಂ. ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಆಲಿ, ಕಾರ್ಯದರ್ಶಿ ಮುಸ್ತಫಾ ಎಸ್., ಪದಾಧಿಕಾರಿಗಳಾದ ಅಬ್ದುಲ್ ರಹಿಮಾನ್ ಮದನಿ, ಸೈಫುದ್ದೀನ್, ಮುಸ್ತಫಾ ಪರಂದಾಜೆ, ಶಾಕಿರ್ ಮೊದಲಾದವರು ಹೈಮಾಕ್ಸ್ ಲೈಟ್ ಅಳವಡಿಕೆ ವೇಳೆ ಉಪಸ್ಥಿತಿದ್ದರು.













