







ಕಡಬ: ಯುವವಾಹಿನಿ (ರಿ) ಕಡಬ ಘಟಕದ ನೂತನ ಅಧ್ಯಕ್ಷರಾಗಿ ಸರಿತಾ ಉಂಡಿಲ ಅವರು ಆಯ್ಕೆಯಾಗಿದ್ದಾರೆ.


ಇತ್ತೀಚೆಗೆ ನಡೆದ ಘಟಕದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಜಯಪ್ರಕಾಶ್ ದೋಳ, ದ್ವಿತೀಯ ಉಪಾಧ್ಯಕ್ಷರಾಗಿ ಸತೀಶ್ ಬಳ್ಪ, ಕಾರ್ಯದರ್ಶಿಯಾಗಿ ಧನಂಜಯ ಮರ್ದಾಳ, ಜೊತೆ ಕಾರ್ಯದರ್ಶಿಯಾಗಿ ತುಳಸಿ ಪಡ್ಕಿಲಾಯ, ಕೋಶಾಧಿಕಾರಿಯಾಗಿ ಸವಿತಾ ಸುಬ್ರಹ್ಮಣ್ಯ ಅವರನ್ನು ಆಯ್ಕೆ ಮಾಡಲಾಯಿತು.



ವಿವಿಧ ವಿಭಾಗಗಳ ನಿರ್ದೇಶಕರಾಗಿ ಯಶೋಧರ ಜಾಲು (ವ್ಯಕ್ತಿತ್ವ), ಮಹೇಶ್ ಅಲಂಕಾರು (ಕ್ರೀಡೆ), ಪವನ್ ಬಲ್ಪ (ಸಮಾಜ ಸೇವೆ), ರೇಖಾ ಐತ್ತೂರು (ಆರೋಗ್ಯ), ಯತಿನ್ ಚಾರ್ವಕ (ಪ್ರಚಾರ), ನಂದೀಶ್ ಅಲಂಕಾರು (ವಿದ್ಯಾನಿಧಿ), ಜಯಶೀಲಾ ದಿನೇಶ್ (ಕಲೆ ಮತ್ತು ಸಾಂಸ್ಕೃತಿಕ), ಅನ್ವಿತ ಹೆಚ್ (ವಿದ್ಯಾರ್ಥಿ ಸಂಘಟನೆ), ಹರಿಣಾಕ್ಷಿ ಅಂಙಣ (ಮಹಿಳಾ ಸಂಘಟನೆ), ಭರತ್ ರಾಮಕುಂಜ (ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ), ಪ್ರೇಮಾ ವಿದ್ಯಾನಗರ (ನಾರಾಯಣ ಗುರು ತತ್ವ ಪ್ರಚಾರ) ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿಗಳಾಗಿ ಗಿರೀಶ್ ಬೆಂಗಡ್ಕ, ಪ್ರಣಿತ್ ಅಮೈ, ಭವ್ಯ ಅಲಂಕಾರು, ದಿವ್ಯಾ ನೂಜಾಡಿ, ಮನೋಜ್ ಕೊರಿಯರ್, ರಚನಾ ಹರೀಶ್ ಮುಧ್ವ, ಶಿಲ್ಪಾ ಕೇನ್ಯ, ನಾಗೇಶ್ ಪಂಜ, ರಮ್ಯಾ ಸುದರ್ಶನ್, ಆಶಾ ಬೆಂಗತ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು.










