‘ಪುತ್ತೂರಲ್ಲಿ 8 ಮಂದಿ ಕಾಂಗ್ರೆಸ್ ನಾಯಕರಿಗೆ ಅವಕಾಶ ಸಿಗಲಿಲ್ಲ, ಒಂಬತ್ತನೇ ವ್ಯಕ್ತಿಗೆ ಟಿಕೆಟ್ ಹೇಗೆ ಸಿಕ್ಕಿತು’ ? ದಯಾನಂದ ಶೆಟ್ಟಿ ಉಜಿರೆಮಾರು

0

ಪುತ್ತೂರು: 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂಟು ಪ್ರಮುಖರು ಕೆಪಿಸಿಸಿಗೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರೂ, ಅವರಿಗೆ ಅವಕಾಶ ನೀಡದೆ ಒಂಬತ್ತನೇ ವ್ಯಕ್ತಿಗೆ ಟಿಕೆಟ್ ನೀಡಲಾಗಿತ್ತು. ಹಾಗಾದರೆ ಆ ಒಂಬತ್ತನೇ ವ್ಯಕ್ತಿ ಎಲ್ಲಿಂದ ಬಂದರು ಎಂಬ ಪ್ರಶ್ನೆ ಮೂಡುತ್ತದೆ. ಪುತ್ತೂರಿನಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಸ್ಟಿಂಗ್ ಆಪರೇಷನ್‌ಗೂ ಟಿಕೆಟ್ ಹಂಚಿಕೆಗೂ ಸಂಬಂಧವಿದೆಯೇ ಎಂಬ ಸಂಶಯವಿದ್ದು, ಈ ಬಗ್ಗೆ ನ್ಯಾಯಯುತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಆಗ್ರಹಿಸಿದರು.


ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅವರು ಪತ್ರಿಕಮಾದ್ಯದೊಂದಿಗೆ ಮಾತನಾಡಿದರು. ಪುತ್ತೂರು ಶಾಸಕರು ಬಿಜೆಪಿ ಜಿಲ್ಲಾಧ್ಯಕ್ಷರು ಕೇಳಿದ ಪ್ರಶ್ನೆಗೆ ಉತ್ತರಿಸದೆ ಇನ್ನೆನ್ನೋ ಹೇಳುವುವುದು ಮತ್ತು ಅಧ್ಯಕ್ಷರನ್ನು ಏಕವಚನದಲ್ಲಿ ಉಲ್ಲೇಖಿಸಿ ಮಾತನಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸ್ಟಿಂಗ್ ಆಪರೇಷನ್ ಕುರಿತು ನೀಡಿರುವ ಹೇಳಿಕೆಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ ಎಂದರು.

LEAVE A REPLY

Please enter your comment!
Please enter your name here