







ನೆಲ್ಯಾಡಿ: ಸ್ಕೂಟರ್ ಪಲ್ಟಿಯಾಗಿ ಯುವತಿ ಗಾಯಗೊಂಡ ಘಟನೆ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಗರಗಸಪಾಲ್ ಎಂಬಲ್ಲಿ ಅ.25ರಂದು ಬೆಳಗ್ಗೆ ನಡೆದಿದೆ.


ರೆಖ್ಯ ನಿವಾಸಿ ಮನ್ವಿತಾ (20ವ.) ಗಾಯಗೊಂಡವರು. ಈಕೆ ಕುಸುಮಾಧರ ಅವರ ಜೊತೆಗೆ ಸ್ಕೂಟರ್ (ಕೆಎ21, ಇಎ 6753)ನಲ್ಲಿ ಸಹ ಸವಾರಳಾಗಿ ಕಲ್ಲುಗುಡ್ಡೆಯಿಂದ ಪೇರಡ್ಕ ಪೆಟ್ರೋಲ್ ಪಂಪ್ಗೆಂದು ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ರೆಂಜಿಲಾಡಿ ಗ್ರಾಮದ ಗರಗಸಪಾಲ್ ಎಂಬಲ್ಲಿ ಸ್ಕೂಟರ್ ಸವಾರ ಕುಸುಮಾಧರ ಅವರ ನಿಯಂತ್ರಣ ತಪ್ಪಿ ಮಣ್ಣು ರಸ್ತೆಗೆ ಇಳಿದು ಪಲ್ಟಿಯಾಗಿದೆ. ಈ ವೇಳೆ ಸ್ಕೂಟರ್ ಮನ್ವಿತಾ ಅವರ ಬಲಗಾಲು ಮೇಲೆ ಬಿದ್ದ ಪರಿಣಾಮ ಅವರಿಗೆ ರಕ್ತಗಾಯವಾಗಿದೆ. ಕುಸುಮಾಧರ ಅವರು ಗಾಯಾಳುವನ್ನು ಉಪಚರಿಸಿ ಅದೇ ಸ್ಕೂಟರ್ನಲ್ಲಿ ಕುಳ್ಳಿರಿಸಿಕೊಂಡು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













