ಸವಣೂರು : ಅಪ್ಪಿ ರೈ ಪರಿಯಾಲಗುತ್ತು ಕೆರೆಕೋಡಿಯವರ ಉತ್ತರಕ್ರಿಯೆ- ನುಡಿನಮನ

0

ಪುತ್ತೂರು: ಅ. 14 ರಂದು ನಿಧನರಾದ ಸವಣೂರು ಗ್ರಾಮದ ಕೆರೆಕೋಡಿ ನಿವಾಸಿ ಅಪ್ಪಿ ರೈ ಪರಿಯಾಲಗುತ್ತುರವರ ಉತ್ತರಕ್ರಿಯೆ- ಶ್ರದ್ಧಾಂಜಲಿ ಸಲ್ಲಿಸುವ ನುಡಿನಮನ ಕಾರ್‍ಯಕ್ರಮ ಅ. 26 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಪುತ್ತೂರು ತಾ.ಪಂ, ಮಾಜಿ ಸದಸ್ಯ ಮೋಹನ್ ರೈ ನರಿಮೊಗರುರವರು ನುಡಿನಮನ ಕಾರ್‍ಯಕ್ರಮದಲ್ಲಿ ಮಾತನಾಡಿ ಅಪ್ಪಿ ರೈಯವರು ಸಮಾಜ ಮತ್ತು ಕುಟುಂಬದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು, ಸರಳ, ಸಜ್ಜನಿಕೆ ವ್ಯಕ್ತಿತ್ವ, ಪರೋಪಕಾರ ಮನೋಭಾವದಿಂದ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು. ಸುಮಾರು 50 ವರ್ಷಗಳ ಹಿಂದೆ ಯಾರೇ ಮನೆಗೆ ಬಂದರೂ ಅವರಿಗೆ ಅನ್ನದಾನ ಮಾಡುತ್ತಿದ್ದ ಬಹುದೊಡ್ಡ ಗುಣವನ್ನು ಅಪ್ಪಿ ರೈ ಅವರು ಹೊಂದಿದ್ದರು, ಇವರ ಆದರ್ಶ ಬದುಕು ನಮ್ಮ ಸಮಾಜಕ್ಕೆ ಮಾದರಿ ಎಂದು ನುಡಿನಮನ ಸಲ್ಲಿಸಿದರು.


ಅಪ್ಪಿ ರೈಯವರ ಮಕ್ಕಳಾದ ಕುಸುಮ ಪಿ.ಶೆಟ್ಟಿ ಪರಿಯಾಲಗುತ್ತು ಕೆರೆಕೋಡಿ, ಶೀಲಾವತಿ ಎಂ. ರೈ ಪರಿಯಾಲಗುತ್ತು ಕೆರೆಕೋಡಿ, ಅಳಿಯಂದಿರಾದ ಪದ್ಮನಾಭ ಶೆಟ್ಟಿ ಬಾಕ್ರಬೈಲು( ದುಬೈ ಯುಎಇ) ಮನೋಹರ್ ರೈ ಡಿ.ಟಿ.ನೀಲುಮಾಡು ಕೆರೆಕೋಡಿ, ಮೊಮ್ಮಕಳಾದ ಸ್ನೇಹಿತ್ ಪಿ.ಶೆಟ್ಟಿ(ದುಬೈ ಯುಎಇ) ಸುಷ್ಮಾ ಸ್ನೇಹಿತ್ ಶೆಟ್ಟಿ ದುಬೈ ಯುಎಇ, ಸಿಂಚನ್ ಪಿ.ಶೆಟ್ಟಿ ಪೂನಾ, ನಿಶ್ಮಾ ಅಶ್ವಥ್ ರೈ ಮರ್ದಾಳ ದೋಳ, ಅಶ್ವಥ್ ರೈ ಮಾರ್ದಳ ದೋಳ, ನಿಶ್ಚಲ್ ಎಂ.ರೈ ದುಬೈ ಯುಎಇ, ಅರ್ಹ ಎ.ರೈ ಮತ್ತು ಗಣೇಶ್ ಶೆಟ್ಟಿ ಕಲ್ಪಾಜೆ, ವಸಂತಿ ಗಣೇಶ್ ಶೆಟ್ಟಿ, ಅತ್ಮಿ ಜಿ.ಶೆಟ್ಟಿ, ಮೋಹನ್ ರೈ ಕೆರೆಕೋಡಿ, ಚಂದ್ರಕಲಾ ಮೋಹನ್ ರೈ, ಭವಹರಿ ಎಂ.ರೈ, ಕೃಪಹರಿ ಎಂ.ರೈ, ಗಣೇಶ್ ರೈ ಕುಕ್ಕಂದೂರು ಸುಳ್ಯ, ಆಶಾ ಗಣೇಶ್ ರೈ, ಚಿಂತನ್ ಜಿ.ರೈ ಬೆಂಗಳೂರು ಹಾಗೂ ಭುವಿ ಜಿ.ರೈ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ಸವಣೂರಿನ ಹಿರಿಯ ಉದ್ಯಮಿ ಎನ್.ಸುಂದರ ರೈ, ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ್ ಶೆಟ್ಟಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಮತ್ತು ನಿರ್ದೇಶಕರುಗಳು, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ನಿರ್ದೇಶಕರುಗಳು, ಪುತ್ತೂರು ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ದ,ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಪಿ.ಡಿ.ಕೃಷ್ಣ ಕುಮಾರ್ ರೈ ದೇವಸ್ಯ, ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ ಸೇರಿದಂತೆ ಸಾಮಾಜಿಕ, ರಾಜಕೀಯ, ಸಹಕಾರ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here