







ಪುತ್ತೂರು: ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು ಪ್ರತಿವರ್ಷ ನಡೆಸುವ ವಿದ್ಯಾರ್ಥಿಗಳ ಬೃಹತ್ ಕಲಾ ಪ್ರತಿಭಾ ಸಂಗಮ “ಈಡನ್ ಗ್ಲಾನ್ಝ 2K26” ಕಾರ್ಯಕ್ರಮದ ದಿನಾಂಕ ಘೋಷಣಾ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು.


ಸಂಸ್ಥೆಯ ಕಾರ್ಯದರ್ಶಿ ಬಶೀರ್ ಹಾಜಿ, ಟ್ರಸ್ಟಿಗಳಾದ ಪುತ್ತುಬಾವ ಹಾಜಿ, ಖಾದರ್ ಹಾಜಿ, ಪ್ರಾಂಶುಪಾಲ ರಂಝಿ ಮುಹಮ್ಮದ್, ಉಪ ಪ್ರಾಂಶುಪಾಲ ಅಝ್ಹರ್, ಮೌಲ್ಯ ಶಿಕ್ಷಣದ ಮುಖ್ಯ ಶಿಕ್ಷಕ ಡಾ. ನಿಝಾಮುದ್ದೀನ್ ಝೈನಿ, ಶೈಕ್ಷಣಿಕ ಸಂಯೋಜಕಿ ಹರ್ಷಿತಾ, ಇಸಿಸಿಇ ಸಂಯೋಜಕಿ ಶ್ರುತಿ ಶೆಟ್ಟಿ, ಮೇಲ್ವಿಚಾರಕ ಅಝೀಝ್ ಚೆನ್ನಾರ್ ಉಪಸ್ಥಿತಿಯಲ್ಲಿ ನ.11 ಮತ್ತು 12ರಂದು ಈಡನ್ ಗ್ಲಾನ್ಝ್ ಹಾಗೂ ಗ್ಲಾನ್ಝ್ ಪ್ರಚಾರಾರ್ಥ ಆಕರ್ಷಕ ವಿದ್ಯಾರ್ಥಿಗಳ ಸಂದೇಶ ಜಾಥಾ ನ.9ರಂದು ನಡೆಯಲಿದೆ ಎಂದು ಘೋಷಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಶಿಝ ಫಾತಿಮಾ ನಿರೂಪಿಸಿದರು.



ಈಡನ್ ಗ್ಲಾನ್ಝ್ ಮಿಲಾದುನ್ನೆಬಿ ಹೆಸರಿನಲ್ಲಿ ಶಾಲೆಯ ಸರ್ವ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದ ವೇದಿಕೆಯಾಗಿದೆ. ಒಳಾಂಗಣ ಹಾಗೂ ಹೊರಾಂಗಣದ 100ಕ್ಕೂ ಮಿಕ್ಕ ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ, ಪ್ರತಿ ವಿದ್ಯಾರ್ಥಿಯ ಪ್ರತಿಭೆಯನ್ನು ಗುರುತಿಸಿ ಅರ್ಹ ವೇದಿಕೆ ಒದಗಿಸುವ ಉದ್ದೇಶದಿಂದ ಪ್ರತಿವರ್ಷ ನಡೆಸುವಂತೆ ಈ ಬಾರಿಯೂ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯಲಿದೆ.
ಗ್ಲಾನ್ಝ್ ಸಂದೇಶದ ಭಾಗವಾಗಿ ನಡೆಯಲಿರುವ ಪ್ರಚಾರ ಜಾಥಾದಲ್ಲಿ ವಿದ್ಯಾರ್ಥಿಗಳ ಆಕರ್ಷಕ ಸ್ಕೌಟ್, ದಫ್, ಫ್ಲವರ್ ಶೋ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.










