







ಬೆಟ್ಟಂಪಾಡಿ: ಪ್ರಕೃತಿ ಒಂದು ನಿಗೂಢವಾದ ರಹಸ್ಯವನ್ನು ಒಳಗೊಂಡಿದೆ ಎನ್ನುವುದಕ್ಕೆ ಆಗಾಗ್ಗೆ ಪ್ರಕೃತಿಯಲ್ಲಿ ಅಸಹಜ ಮತ್ತು ಅಚ್ಚರಿಯ ಸಂಗತಿಗಳು ಕಂಡುಬರುವುದೇ ಸಾಕ್ಷಿ.ಇಲ್ಲೊಂದು ಕಡಿದ ಬಾಳೆಗಿಡದಲ್ಲಿ ಎಲೆಗಳಿಲ್ಲದೇ ಹೂ ಬಿಟ್ಟು ಗೊನೆ ಅರಳಿರುವುದು ಅಚ್ಚರಿ ಮೂಡಿಸಿದೆ.
ಬೆಟ್ಟಂಪಾಡಿ ಯ ಶ್ರೀ ದುರ್ಗಾ ಕ್ಲಿನಿಕ್ ನ ವೈದ್ಯರಾದ ಡಾ. ಶ್ರೀಕೃಷ್ಣ ಭಟ್ ಕಜೆಮೂಲೆಯವರ ತೋಟದಲ್ಲಿ ಹೀಗೊಂದು ಬಾಳೆಗಿಡ ನೋಡುಗರಲ್ಲಿ ಅಚ್ಚರಿ ತರಿಸಿದೆ. ಹೇರಳವಾಗಿ ಬೆಳೆದಿದ್ದ ಬಾಳೆಗಿಡಗಳ ಪೈಕಿ ಇತ್ತೀಚೆಗೆ ಒಂದು ಬುಡವನ್ನು ಸುಮಾರು 3 ಅಡಿ ಬಿಟ್ಟು ಅವರ ಕೆಲಸದಾಳು ಕಡಿದಿದ್ದರು. ಆದರೆ ಇದೀಗ ಕಡಿದ ಬಾಳೆಗಿಡದಲ್ಲಿ ಹೂವರಳಿ, ಗೊನೆ ಬಿಟ್ಟ ದೃಶ್ಯ ಕಂಡುಬಂದಿದೆ.
ಗೊಬ್ಬರ ಹಾಕಿ ಸಮೃದ್ಧವಾಗಿ ಬೆಳೆಸಿದ ಬಾಳೆಗಿಡಗಳು ಸರಿಯಾಗಿ ಹೂ ಕಾಯಿ ಬಿಡದೆ ಕೃಷಿಕರಿಗೆ ನಷ್ಟವುಂಟಾಗುವುದು ಒಂದು ಕಡೆಯಾದರೆ ಕಡಿದ ಬಾಳೆಗಿಡದಲ್ಲೂ ಕಾಯಿ ಬಿಡುವುದು ಪ್ರಕೃತಿಯ ಸಹಜತೆ ಗೆ ಸಾಕ್ಷಿಯಾಗಿದೆ.












