ಕೋಡಿಂಬಾಡಿ ಬಳಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ – ಚಾಲಕ ಮೃತ್ಯು

0

ಪುತ್ತೂರು: ಕೋಡಿಂಬಾಡಿ ಅರ್ಭಿ ಸಮೀಪ ತೆಂಗಿನ ಕಾಯಿ ಸಾಗಾಟದ ಪಿಕಪ್ ಪಲ್ಟಿಯಾಗಿ ಅದರಲ್ಲಿದ್ದ ಚಾಲಕ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಪಿಕಪ್ ಚಾಲಕ ಬನ್ನೂರು ನಿವಾಸಿ ಶಿವಪ್ರಸಾದ್(50ವ) ಮೃತಪಟ್ಟವರು. ಉಪ್ಪಿನಂಗಡಿಯಿಂದ ಸೇಡಿಯಾಪು ಕೊಸ್ಟಲ್ ಕೊಕನೆಟ್ ಇಂಡಸ್ಟ್ರೀಸ್‌ಗೆ ತೆಂಗಿನ ಕಾಯಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಕೋಡಿಂಬಾಡಿ ಅರ್ಬಿ ಎಂಬಲ್ಲಿ ಆಕಸ್ಮಿಕವಾಗಿ ಪಲ್ಟಿಯಾಗಿದೆ. ಪಲ್ಟಿಯ ರಭಸಕ್ಕೆ ಚಾಲಕ ಶಿವಪ್ರಸಾದ್ ಅವರು ಮೃತಪಟ್ಟಿದ್ದು, ವಾಹನದಲ್ಲಿದ್ದ ತೆಂಗಿನ ಕಾಯಿ ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದಿತ್ತು.

ಕಾಂಚನ ಮೂಲದ ಶಿವಪ್ರಸಾದ್:
ಶಿವಪ್ರಸಾದ್ ಅವರು ಕಾಂಚನ ಮೂಲದವರಾಗಿದ್ದು, ಪುತ್ತೂರು ಬನ್ನೂರಿನಲ್ಲಿ ವಾಸ್ತವ್ಯ ಹೊಂದಿದ್ದರು. ಉಪ್ಪಿನಂಗಡಿಯಲ್ಲಿ ಸಿ.ಎಸ್ ಟ್ರೇಡರ್‍ಸ್ ಸಂಸ್ಥೆಯ ಜೊತೆ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದ ಅವರು ಅ.28ರಂದು ಪುತ್ತೂರು ಸೇಡಿಯಾಪಿಗೆ ಪಿಕಪ್ ವಾಹನದಲ್ಲಿ ತೆಂಗಿನ ಕಾಯಿ ಸಾಗಾಟ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

LEAVE A REPLY

Please enter your comment!
Please enter your name here