ನೆಲ್ಯಾಡಿ: ಕಾಂಗ್ರೆಸ್ ರಾಮನಗರ ವಾರ್ಡ್ ಸಮಿತಿಯಿಂದ ಉಚಿತ ಪುಸ್ತಕ ವಿತರಣೆ

0

ನೆಲ್ಯಾಡಿ: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೆಲ್ಯಾಡಿ ಗ್ರಾಮದ ರಾಮನಗರ ವಾರ್ಡ್ ಸಮಿತಿಯ ವತಿಯಿಂದ 40 ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ರಾಮನಗರ ಅಮೆತ್ತಿಮಾರುಗುತ್ತು ಮನೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಕಾರ್ಮಿಕ ಇಲಾಖೆ ಸದಸ್ಯ, ಕೆಪಿಸಿಸಿ ಸುಳ್ಯ ಕ್ಷೇತ್ರದ ಉಸ್ತುವಾರಿ ಕೃಷ್ಣಪ್ಪರವರು ಉಚಿತ ಪುಸ್ತಕ ವಿತರಿಸಿ ಮಾತನಾಡಿ, ಕಾಂಗ್ರೆಸ್ ಸೇವೆಯನ್ನೇ ಮುಖ್ಯ ಧ್ಯೇಯವನ್ನಾಗಿಸಿಕೊಂಡು ದೇಶದ ಬಡವರ, ಹಿಂದುಳಿದವರ, ಕಾರ್ಮಿಕರ, ಪರಿಶಿಷ್ಠ ಜಾತಿ ವರ್ಗದ ಜನರಿಗೆ ಬದುಕು ಕಟ್ಟಿಕೊಟ್ಟ ಪಕ್ಷವಾಗಿದೆ. ಎಲ್ಲಾ ವರ್ಗದವರೂ ಶಿಕ್ಷಣವನ್ನು ಪಡೆಯಬೇಕು. ಆ ಮೂಲಕ ಸ್ವಾವಲಂಬನೆಯ ಬದುಕನ್ನು ಬದುಕಬೇಕು ಎನ್ನುವ ಗುರಿಯೊಂದಿಗೆ ಕಾಂಗ್ರೆಸ್ ಪಕ್ಷ ಅವಿರತವಾಗಿ ದುಡಿಯುತ್ತಾ ಇದೆ. ಎಲ್ಲಾ ವರ್ಗದ ಮಕ್ಕಳಿಗೆ ಶಿಕ್ಷಣಕ್ಕಾಗಿ ಪ್ರೋತ್ಸಾಹವನ್ನು ನೀಡಿ ಉಚಿತ ಪುಸ್ತಕ ವಿತರಣೆ ಮಾಡುವ ಮೂಲಕ ಪಕ್ಷದ ಚಿಂತನೆಗಳನ್ನು ಸಾಕಾರಗೊಳಿಸಿದ ರಾಮನಗರ ವಾರ್ಡ್ ಸಮಿತಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಾಂಗ್ರೆಸ್ ನೆಲ್ಯಾಡಿ ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷ ಜೋಸ್ ಕೆ.ಜೆ. ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಕೆ.ಪಿ.ತೋಮಸ್, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ವ್ಯವಸ್ಥಾಪಕ ಕಡಬ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀತಾರಾಮ ಗೌಡ ಕಾನಮನೆ ವಂದಿಸಿದರು.

40 ಮಕ್ಕಳಿಗೆ ಪುಸ್ತಕ:

ಕಾರ್ಯಕ್ರಮದಲ್ಲಿ ಪ್ರಾಥಮಿಕ, ಹೈಸ್ಕೂಲ್ ಹಾಗೂ ಕಾಲೇಜು ವಿಭಾಗದಿಂದ ಆಯ್ದ 40 ಬಡ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.

ಆರ್ಥಿಕ ನೆರವು:

ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಮೂವರು ಮಕ್ಕಳನ್ನು ಓದಿಸುತ್ತಿರುವ ಕೂಲಿ ಕಾರ್ಮಿಕ ರಾಮನಗರ ಸಮೀಪದ ದೇವಿನಗರ ನಿವಾಸಿ ಸೋಮಪ್ಪರವರಿಗೆ ರಾಷ್ಟ್ರೀಯ ಕಾರ್ಮಿಕ ಇಲಾಖೆ ಸದಸ್ಯ, ಕೆಪಿಸಿಸಿ ಸುಳ್ಯ ಕ್ಷೇತ್ರದ ಉಸ್ತುವಾರಿಯಾಗಿರುವ ಕೃಷ್ಣಪ್ಪರವರು ವೈಯಕ್ತಿಕವಾಗಿ ೫ ಸಾವಿರ ರೂ.,ಧನ ಸಹಾಯದ ಚೆಕ್ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here