ಪುತ್ತೂರು:ಟಿಪ್ಪರ್ ಲಾರಿಯೊಂದು ಅಟೋರಿಕ್ಷಾಗೆ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ರಿಕ್ಷಾದಲ್ಲಿದ್ದ ದಂಪತಿ, ಮಕ್ಕಳಿಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 34ನೆಕ್ಕಿಲಾಡಿ ಕಬ್ಬಿನಹಿತ್ಲು ಕೃಷ್ಣಪ್ಪ ನಾಯ್ಕ(39ವ.) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಏ.28ರಂದು 10 ಗಂಟೆಗೆ ಆರೋಪಿ ಟಿಪ್ಪರ್ ಲಾರಿ ಚಾಲಕ ಸುಚಿತ್ ಕುಮಾರ್ ಎಂಬವರು ಟಿಪ್ಪರ್ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಹಂತದ ಸರ್ವಿಸ್ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ತಾನು ಚಲಾಯಿಸುತ್ತಿದ್ದ ಆಟೋರಿಕ್ಷಾಗೆ ಹಿಂದಿನಿಂದ ಡಿಕ್ಕಿಯಾಗಿದೆ. ಇದರಿಂದಾಗಿ ತಾನು, ಪತ್ನಿ ಭಾರತಿ ಹಾಗೂ ಮಗಳು ಆಕರ್ಷಣಿ(14ವ.) ಗಾಯಗೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.ತಾನು ಪತ್ನಿ ಭಾರತಿ, ಮಕ್ಕಳಾದ ಆಕರ್ಷಿಣಿ, ಮಿಥುನ್‌ರನ್ನು ಸಹಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಕರ್ವೇಲು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ರಿಕ್ಷಾಕ್ಕೆ ಟಿಪ್ಪರ್ ಲಾರಿಯು ಹಿಂದಿನಿಂದ ಅಪಘಾತ ಮಾಡಿದೆ. ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿ ರಸ್ತೆಗೆ ಬಿದ್ದಿದೆ.ತನಗೆ ಹಾಗೂ ಹೆಂಡತಿ ಭಾರತಿ, ಮಗಳ ಆಕರ್ಷಣೆಳಿಗೆ ಸಣ್ಣ-ಪುಟ್ಟ ಗುದ್ದಿದೆ. ಗಾಯವಾಗಿದೆ. ಮಗ ಮಿಥುನ್ (09)ಗೆ ತಲೆಗೆ,ಬಲಕೈ ರಟ್ಟೆಗೆ ಗುದ್ದಿದ ಹಾಗೂ ರಕ್ತ ಗಾಯವಾಗಿದ್ದು,ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಕೃಷ್ಣಪ್ಪ ನಾಯ್ಕ ಅವರು ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.