ಪುತ್ತೂರು : ದರ್ಬೆ ಫಿಲೋಮಿನಾ ಪ್ರೌಢಶಾಲೆಯಲ್ಲಿ ಜು.13 ರಂದು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಯಕ್ಷ ಬೊಳ್ಳಿ ಹಾಗೂ ತುಳು ಸಾಹಿತ್ಯ ಅಕಾಡೆಮಿ
ಯಕ್ಷಗಾನ ಹಾಸ್ಯ ಕಲಾವಿದ ದಿನೇಶ್ ರೈ ಕಡಬ, ಹಾಗೂ ದರ್ಬೆ ಮೇಘ ಕಲಾ ಆರ್ಟ್ಸ್ ಮತ್ತು ಮೇಘ ಡಾನ್ಸ್ ಸ್ಟುಡಿಯೋದ ನೃತ್ಯ ನಿರ್ದೇಶಕೀ ಶಾರದಾ ದಾಮೋದರ್, ಮುರಳಿ ಬ್ರದರ್ಸ್ ಡಾನ್ಸ್ ಕ್ರಿವ್ನ ಮುರಳಿ ಮತ್ತು ಶಿವ ನಗರ , ಪೆರ್ನೆ ಅಭಿನವ ಡಾನ್ಸ್ ಅಕಾಡೆಮಿಯ ನೃತ್ಯ ನಿದೇಶಕಿ ವಿದ್ಯಾ ಸನತ್ ಶೆಟ್ಟಿ, ಪ್ರೌಢಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ನಿರೂಪ ರವಿಕುಮಾರ್ ಹಾಗೂ ಮುಖ್ಯಗುರು ಲೋರ ಪಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಿಲೋಮಿನಾ ಪಿಯು ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮ ಬಳಿಕ ವನ ಮಹೋತ್ಸವ ನಂತರ ಮಕ್ಕಳಿಗೆ ನೃತ್ಯ ತರಬೇತಿ ಕಾರ್ಯಕ್ರಮ ನೆರವೇರಿತು.