ಬ್ರ್ಯಾಂಡೆಡ್ ಕನ್ನಡಕಗಳ ಮಳಿಗೆ – ಸ್ಪೆಕ್ಸ್ ಡೆಸ್ಕ್ ಶುಭಾರಂಭ

0

  • ಶುಭಾರಂಭದ ಕೊಡುಗೆಯಾಗಿ ಶೇ.20 ರಿಂದ 30 ರಿಯಾಯಿತಿ
  • ಬದಲಾವಣೆಯಾದಷ್ಟು ಸಾರ್ವಜನಿಕರಿಗೆ ಪ್ರಯೋಜನ – ಹೇಮನಾಥ ಶೆಟ್ಟಿ ಕಾವು
  • ಉತ್ತಮ ಸೇವೆ ಸಿಗಲಿ – ಸಾಯಿರ ಜುಬೈರ್
  • ಬ್ರ್ಯಾಂಡೆಡ್ ಶೋರೂಮ್‌ನಿಂದಾಗಿ ಸಮಯ, ಹಣ ಉಳಿತಾಯ – ಕೀರ್ತನ್ ಶೆಟ್ಟಿ
  • ಸಂಸ್ಥೆಯ ಅಭಿವೃದ್ಧಿ ಹೊಂದಲಿ – ಅಶ್ಫಕ್ ಮೊಯಿದ್ದೀನ್
  • ಕಣ್ಣಿನ ಆರೋಗ್ಯ ಕಾಪಾಡಿ – ನೂರುದ್ದೀನ್ ಸಾಲ್ಮರ

ಪುತ್ತೂರು: ವಿಶ್ವವಿಖ್ಯಾತ ಹೊಂದಿರುವ ಬ್ರ್ಯಾಂಡೆಡ್ ಕನ್ನಡಕಗಳ ಮಳಿಗೆ ಸ್ಪೆಕ್ಸ್ ಡೆಸ್ಕ್ ಇಲ್ಲಿನ ಪುತ್ತೂರು ಮೀನಾರ್ ಕಾಂಪ್ಲೆಕ್ಸ್‌ನಲ್ಲಿ ಆ.೨೬ರಂದು ಶುಭಾರಂಭಗೊಂಡಿತು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಮೀನಾರ್ ಕಾಂಪ್ಲೆಕ್ಸ್ ಮಾಲಕ ಅದಂ ಕುಂಞಿಯವರು ಮತ್ತು ಯುನಿಟಿ ಆಸ್ಪತ್ರೆಯ ನಿರ್ದೇಶಕ ಅಶ್ಫಕ್ ಮೊಯಿದ್ದೀನ್ ಅವರು ಜೊತೆಯಾಗಿ ಕಣ್ಣು ಪರೀಕ್ಷೆಯ ಕಂಪ್ಯೂಟರೈಸ್ಡ್ ವಿಭಾಗವನ್ನು ಉದ್ಘಾಟಿಸಿದರು.

ಬದಲಾವಣೆಯಾದಷ್ಟು ಸಾರ್ವಜನಿಕರಿಗೆ ಪ್ರಯೋಜನ:
ನೂತನ ಮಳಿಗೆಯನ್ನು ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಉದ್ಘಾಟಿಸಿದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ದೃಷ್ಟಿಗೆ ಪೂರಕವಾಗಿರುವ ಕನ್ನಡಕಗಳು ಕಣ್ಣಿನ ಅವಶ್ಯಕತೆಗೆ ತಕ್ಕಂತೆ ಇರಬೇಕು. ಈ ನಿಟ್ಟಿನಲ್ಲಿ ಕೇವಲ ಕನ್ನಡಕದ ಮಳಿಗೆ ಮಾತ್ರವಲ್ಲ ಜೊತೆಗೆ ತಾನೊಬ್ಬ ವೈದ್ಯನಾಗಿ ಬರುವ ಗ್ರಾಹಕರಿಗೆ ಸೂಕ್ತ ಅನ್ನುವಷ್ಟರ ಮಟ್ಟಿಗೆ ಅವರ ಕಣ್ಣಿನ ಪರೀಕ್ಷೆ ಮಾಡಿಯೇ ಕನ್ನಡಕ ನೀಡುವ ಪ್ರಾಮಾಣಿಕತೆ ಜನರಿಗೆ ಮೆಚ್ಚುಗೆಯಾಗುತ್ತದೆ. ಈ ನಿಟ್ಟಿನಲ್ಲಿ ಇವತ್ತಿನ ಕಾಲಗಟ್ಟದಲ್ಲಿ ಬದಲಾವಣೆ ಆದಷ್ಟು ಸಾರ್ವಜನಿಕರಿಗೆ ಪ್ರಯೋಜನವಾಗುತ್ತದೆ. ಕನ್ನಡಕವು ದೃಷ್ಟಿಗೆ, ಫ್ಯಾನ್ಸಿಗೆ, ಮಾರ್ಗದ ಧೂಳಿನಿಂದ ರಕ್ಷಣೆಗಾಗಿ ಬಹಳ ಅಗತ್ಯ. ಪುತ್ತೂರಿಗೆ ಇಂತಹ ಗುಣಮಟ್ಟದ ಕನ್ನಡಗಳ ಮಳಿಗೆ ಬಂದಿರುವುದು ಸಂತೋಷದ ವಿಚಾರ ಎಂದರು.

ಉತ್ತಮ ಸೇವೆ ಸಿಗಲಿ:
ನ್ಯಾಯಾವಾದಿ ಸಾಯಿರಾ ಜುಬೈರ್ ಅವರು ಮಾತನಾಡಿ ಉದ್ಯಕ್ಕೆ ಬೇಕಾದ ಮುಖ್ಯ ಅಂಶ ಸರಳತೆ. ತಾನೊಬ್ಬ ಡಾಕ್ಟರ್ ಎಂಬ ಅಹಂ ಇಲ್ಲದೆ ಸರಳತೆಯಲ್ಲಿರುವಾಗ ಸಂಸ್ಥೆಯಿಂದ ಉತ್ತಮ ಸೇವೆ ಸಿಗುವುದು ಸಾಧ್ಯ. ಅವರ ಪ್ರಾಮಾಣಿಕತೆಯಿಂದ ನೂತನ ಮಳಿಗೆ ಉತ್ತಮ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.

c

ಬ್ರ್ಯಾಂಡೆಡ್ ಶೋರೂಮ್‌ನಿಂದಾಗಿ ಸಮಯ, ಹಣ ಉಳಿತಾಯ:
ಸಂಸ್ಥೆಯ ಮಾಲಕರ ಸ್ನೇಹಿತ ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಕೀರ್ತನ್ ಶೆಟ್ಟಿಯವರು ಮಾತನಾಡಿ ಇವತ್ತು ಬ್ರ್ಯಾಂಡೆಡ್ ಕನ್ನಡಕಗಳಿಗೆ ಮಂಗಳೂರಿಗೆ ಹೋಗುವ ಬದಲು ಅಲ್ಲಿಂದಲೂ ಮಿತದರದಲ್ಲಿ ಪುತ್ತೂರಿನಲ್ಲೆ ನೂತನ ಶೋರೂಮ್‌ನಲ್ಲಿ ಲಭ್ಯವಾಗುತ್ತಿರುವುದು ಗ್ರಾಹಕರ ಸಮಯ ಮತ್ತು ಹಣ ಉಳಿದಂತೆ. ಈ ನಿಟ್ಟಿನಲ್ಲಿ ಪುತ್ತೂರಿನ ಜನತೆ ನೂತನ ಶೋರೂಮ್‌ನ ಸದುಪಯೋಗ ಪಡೆಯುವಂತೆ ವಿನಂತಿಸಿದರು.

ಸಂಸ್ಥೆಯ ಅಭಿವೃದ್ಧಿ ಹೊಂದಲಿ:
ಯುನಿಟಿ ಆಸ್ಪತ್ರೆಯ ನಿರ್ದೇಶಕ ಅಶ್ಫಕ್ ಮೊಯಿದ್ದೀನ್ ಅವರು ಮಾತನಾಡಿ ನಮ್ಮ ಆತ್ಮೀಯ ಸ್ನೇಹಿತರಾಗಿರುವ ಮುದಸ್ಸಿರ್ ಅವರ ಕನ್ನಡಕದ ಶೋ ರೂಮ್ ಉತ್ತಮ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಕಣ್ಣಿನ ಆರೋಗ್ಯ ಕಾಪಾಡಿ :
ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರು ಮಾತನಾಡಿ ಕಣ್ಣಿನ ಪ್ರಾಮುಖ್ಯತೆ ಅರಿಯದವರು ಯಾರೂ ಇಲ್ಲ. ಲೋಕವನ್ನು ಕಾಣುವ ಮೊದಲ ಅಂಗ ಎಂದರೆ ಕಣ್ಣು. ಹಾಗಾಗಿ ಕಣ್ಣಿನ ಬಗ್ಗೆ ಅಸಡ್ಡೆ ಬೇಡ. ಕನ್ನಡಕ ಧರಿಸಿದಾಗ ಪ್ರಾಯದ ಆಗಿದೆ ಎಂಬ ಕೀಳರಿಮೆಯೂ ಬೇಡ. ಇವತ್ತು ಕನ್ನಡಕದಲ್ಲೂ ಆಧುನಿಕತೆ ಬಂದಿದೆ. ಕಣ್ಣಿಗೆ ಹೆಚ್ಚು ಒತ್ತಡ ಕೊಡದೆ ಆಗಾಗೆ ಕಣ್ಣು ಪರೀಕ್ಷೆ ಮಾಡಿಸಿಕೊಂಡು ಕನ್ನಡಕ ಧರಿಸಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ. ಈ ನಿಟ್ಟಿನಲ್ಲಿ ನೂತನ ಸಂಸ್ಥೆಯಲ್ಲಿ ಕಣ್ಣಿನ ಪರೀಕ್ಷೆಯು ಉಚಿತವಾಗಿ ಮಾಡಲಾಗುತ್ತದೆ. ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ರವಿಪ್ರಸಾದ್ ಶೆಟ್ಟಿ ಬನ್ನೂರು, ವಿನಿತ್ ಶೆಣೈ, ಕಿಶನ್ ನಾಯರ್ ಸೇರಿದಂತೆ ಹಲವಾರು ಮಂದಿ ಗಣ್ಯರು ಆಗಮಿಸಿದರು. ನೂತನ ಕನ್ನಡಕ ಮಳಿಗೆ ಸ್ಪೆಕ್ಸ್ ಡೆಸ್ಕ್‌ನ ಮಾಲಕ ಮುದ್ದಸಿರ್ ಅವರು ಸ್ವಾಗತಿಸಿ, ವಂದಿಸಿದರು.

ಶುಭಾರಂಭದ ಅಂಗವಾಗಿ ರಿಯಾಯಿತಿ
ಶುಭಾರಂಭದ ಪ್ರಯುಕ್ತ ಕನ್ನಡ ಖರೀದಿಯಲ್ಲಿ ಪ್ರೇಮ್‌ಗೆ ಶೇ.೨೦ ಮತ್ತು ಲೆನ್ಸ್‌ಗಳಿಗೆ ಶೇ. ೩೦ ರಷ್ಟು ರಿಯಾಯಿತಿ ನೀಡಲಾಗಿದ್ದು, ರೂ. ೬೯೯ ರಿಂದ ಹಿಡಿದು ರೂ. ೩೦ಸಾವಿರ ಬೆಲೆ ಬಾಳುವ ಪ್ರಸಿದ್ಧ ಕಂಪೆನಿಗಳ ಕನ್ನಡಕಗಳು ಮಳಿಗೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಕೇವಲ ಕನ್ನಡಕ ಮಾರಾಟ ಮಾತ್ರವಲ್ಲ. ಸರಿಪಡಿಸುವ ದೃಷ್ಟಿಗೆ ಕನ್ನಡಕಗಳನ್ನು ಆಯ್ಕೆಮಾಡಲು ಅಗತ್ಯತೆಯುಳ್ಳವರಿಗೆ ಕಂಪ್ಯೂಟರೈಸ್ಡ್ ಉಚಿತ ಕಣ್ಣಿನ ಪರೀಕ್ಷೆ ಸೌಲಭ್ಯವಿದೊಂದಿಗೆ ಆಯ್ಕೆ ಮಾಡಿಕೊಂಡ ಕನ್ನಡವನ್ನು ಒಂದೇ ದಿನದಲ್ಲಿ ತ್ವರಿತ ಡೆಲಿವರಿ ಸೌಲಭ್ಯವೂ ಇದೆ – ಡಾ.ಮುದಸ್ಸಿರ್ ಸುರತ್ಕಲ್ ಸಂಸ್ಥೆಯ ಮಾಲಕರು

ವಿವಿಧ ಬ್ರ್ಯಾಂಡೆಡ್ ಕನ್ನಡಕಗಳು
ನೂತನ ಮಳಿಗೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಕನ್ನಡಕಗಳನ್ನು ಬ್ರ್ಯಾಂಡೆಡ್ ಲೆನ್ಸ್‌ಗಳು, ಬ್ಲೂ ಫಿಲ್ಟರ್ ಲೆನ್ಸ್‌ಗಳು ಕಡಿಮೆ ದರದಲ್ಲಿ ಲಭ್ಯವಿದೆ. ಪವರ್‍ಡ್ ಲೆನ್ಸ್‌ಗಳು ಬ್ಲೂ ಫಿಲ್ಟರ್ ಲೆನ್ಸ್‌ಗಳು ಮಿತ ಬೆಲೆಯಲ್ಲಿ ದೊರಕಲಿವೆ. ಪವರ್‍ಡ್ ಲೆನ್ಸ್‌ಗಳು ತಂಪು ಕನ್ನಡಕಗಳು, ಪವರ್‍ಡ್ ತಂಪು ಕನ್ನಡಕಗಳು, ಪವರ್‍ಡ್ ಮತ್ತು ಕಲರ್ ಕಾಂಟಾಕ್ಟ್ ಲೆನ್ಸ್‌ಗಳು ಫೋಟೋಕ್ರೊಮ್ಯಾಟಿಕ್ ಲೆನ್ಸ್‌ಗಳು ಕಂಪ್ಯೂಟರ್ ಮತ್ತು ಮೊಬೈಲ್‌ಗೆ ಬಳಸುವ ಕನ್ನಡಕಗಳು ಡ್ರೈವ್ ಸೇಫ್ ಕನ್ನಡಕಗಳು ದೊರೆಯಲಿವೆ.

LEAVE A REPLY

Please enter your comment!
Please enter your name here