ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿಯೊಬ್ಬರು ಕೊಕ್ಕಡದಲ್ಲಿ ಪತ್ನಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.25ರಂದು ನಡೆದಿದೆ.
ನೆಲ್ಯಾಡಿ ಗ್ರಾಮದ ಮಾದೇರಿ ಪಲಸತಡ್ಕ ನಿವಾಸಿ ವಸಂತ ಮಡಿವಾಳ(46ವ.)ಆತ್ಮಹತ್ಮೆ ಮಾಡಿಕೊಂಡವರಾಗಿದ್ದಾರೆ. ಇವರು ಧರ್ಮಸ್ಥಳದಲ್ಲಿ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿದ್ದರು ಆ.25ರಂದು ಮಧ್ಯಾಹ್ನ ಕೊಕ್ಕಡ ಗ್ರಾಮದ ಕೆಂಪಕೋಡಿಯಲ್ಲಿರುವ ಪತ್ನಿಯ ಮನೆಗೆ ಬಂದು ಮದ್ಯದ ಜೊತೆ ವಿಷಪದಾರ್ಥ ಸೇವಿಸಿದ್ದರು. ಅಸ್ವಸ್ಥಗೊಂಡಿದ್ದ ವಸಂತ ಮಡಿವಾಳರವರನ್ನು ಮನೆಯವರು ತಕ್ಷಣ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆತಂದಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ತಡರಾತ್ರಿ ವೇಳೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ವಿಪರೀತ ಕುಡಿತದ ಚಟಹೊಂದಿದ್ದ ವಸಂತ ಮಡಿವಾಳ ಅವರು ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದರು ಎಂದು ವರದಿಯಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ತಾಯಿ, ಪತ್ನಿ ಹರಿಣಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.