ಇಂಟರ್ ಸರ್ವೀಸಸ್ ಅಕ್ವಾಟಿಕ್ ಚಾಂಪಿಯನ್‌ಶಿಪ್ ನಲ್ಲಿ ವೈಷ್ಣವ್ ಹೆಗ್ಡೆಗೆ ಬೆಳ್ಳಿ ಪದಕ

0

ಪುತ್ತೂರು: ಭಾರತೀಯ ನೌಕಾಪಡೆಯಲ್ಲಿರುವ ಪುತ್ತೂರಿನ ವೈಷ್ಣವ್ ಹೆಗ್ಡೆ 71 ನೇ ಇಂಟರ್ ಸರ್ವೀಸಸ್ ಅಕ್ವಾಟಿಕ್ ಚಾಂಪಿಯನ್‌ಶಿಪ್ 2022-23 ರಲ್ಲಿ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 29.6 ಸೆಕೆಂಡುಗಳಲ್ಲಿ ತಲುಪುವ ಮೂಲಕ ಬೆಳ್ಳಿ ಪದಕವನ್ನು ಗೆದ್ದರು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯು ಪಡೆಗಳ ಈಜುಗಾರರು ಈ ಸ್ಪರ್ಧೆಯಲ್ಲಿ ಭಸಗವಹಿಸಿದ್ದರು.

ಈ ಸ್ಪರ್ಧೆ ಆ. 22 ರಿಂದ 26 ರವರೆಗೆ ವಿಶಾಖಪಟ್ಟಣಂನ ನೌಕಾ ನೆಲೆಯ INS CIRCARS ನಡೆಯಿತು. ಈ ಮೂಲಕ ವೈಷ್ಣವ್ ಈ ವರ್ಷದ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಸೀನಿಯರ್ ನ್ಯಾಷನಲ್ಸ್ ಅಕ್ವಾಟಿಕ್ ಚಾಂಪಿಯನ್‌ಶಿಪ್ ಮತ್ತು ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ಇದೇ ನೌಕಾ ನೆಲೆಯಲ್ಲಿ ಆಗಸ್ಟ್ 12 ರಂದು ನಡೆದ ನೌಕಾ ಟ್ರಯಲ್ಸ್‌ನಲ್ಲಿ ವೈಷ್ಣವ್ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 29.6 ರಲ್ಲಿ ಚಿನ್ನದ ಪದಕ ಗೆದ್ದಿದ್ದರು.

ವೈಷ್ಣವ್ ಹೆಗ್ಡೆ ಅವರು ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಸದಸ್ಯರಾಗಿದ್ದಾರೆ ಮತ್ತು ಕೋಚ್ ಪಾರ್ಥ ವಾರಾಣಶಿ, ನಿರೂಪ್ , ರೋಹಿತ್ ಮತ್ತು ದೀಕ್ಷಿತ್ ಅವರಿಂದ ಪುತ್ತೂರಿನ ಬಾಲವನ ಈಜುಕೊಳದಲ್ಲಿ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಈಜುಕೊಳದಲ್ಲಿ ತರಬೇತಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here