





- ಎಲ್ಲರ ಸಹಕಾರದಿಂದ ಕ್ಷೇತ್ರದ ಜೀರ್ಣೋದ್ಧಾರ ಸುಸೂತ್ರವಾಗಿ ನಡೆಯಲು ಸಾಧ್ಯ: ಶ್ರೀ ಶ್ರೀಕೃಷ್ಣ ಗುರೂಜಿ
- ಧರ್ಮಕಾರ್ಯದ ಮೂಲಕ ಸಮಾಜದಿಂದ ಮಣ್ಣನೆ ಪಡೆಯಲು ಸಾಧ್ಯ: ಶ್ರೀ ಮಹಾಬಲೇಶ್ವರ ಸ್ವಾಮೀಜಿ
- ನಿಧಿ ಸಂಚಯನ ಒಂದು ಪುಣ್ಯದ ಕೆಲಸವಾಗಿದೆ: ಜಯಂತ ನಡುಬೈಲ್
- ಇದೊಂದು ಬಹಳ ಪವಿತ್ರವಾದ ಕಾರ್ಯಕ್ರಮ: ಪದ್ಮನಾಭ ಪೂಜಾರಿ ಸಣ್ಣಗುತ್ತು
- ಎಲ್ಲರೂ ಒಟ್ಟು ಸೇರಿ ಅಭಿವೃದ್ಧಿಯಲ್ಲಿ ಪಾಲುಪಡೆಯೋಣ: ಎಂ.ಕೆ. ಕುಕ್ಕಾಜೆ
ವಿಟ್ಲ: ಒಳ್ಳೆಯ ಮನಸ್ಸಿದ್ದವರು ಸಿರಿವಂತಮಾಗಲು ಸಾಧ್ಯ. ಹಿರಿಯರ ಸಾಧನೆಯ ಫಲವಾಗಿ ಕ್ಷೇತ್ರ ಇಷ್ಟೊಂದು ಬೆಳಗಲು ಸಾಧ್ಯವಾಗಿದೆ. ಬಡ ಬಗ್ಗರ ನಿಸ್ವಾರ್ಥ ಸೇವೆ ಕ್ಷೇತ್ರಕ್ಕೆ ಅಪಾರವಿದೆ. ನೀವೆಲ್ಲರೂ ಒಟ್ಟಾಗಿ ಕೈಜೋಡಿಸಿದರೆ ಕ್ಷೇತ್ರದ ಜೀರ್ಣೋದ್ಧಾರ ಸುಸೂತ್ರವಾಗಿ ನಡೆಯಲು ಸಾಧ್ಯ ಎಂದು ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿಯವರು ಹೇಳಿದರು.


ಅವರು ಆ.27ರಂದು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ವಿಜ್ಞಾಪನ ಪತ್ರ ಬಿಡುಗಡೆ ಹಾಗೂ ನಿಧಿ ಸಂಚಯನ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಮುಂದಿನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲಿ ಉಪಸಮಿತಿಗಳನ್ನು ನಡೆಸಲಾಗುವುದು. ಆ ಮೂಲಕ ಎಲ್ಲರಿಗೂ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದಲ್ಲಿ ಭಾಗವಹಿಸಲು ಅನುಕೂಲಕರವಾಗಲಿದೆ. ಮೇಲು ಕೀಳೆಂಬ ಭಾವ ಕ್ಷೇತ್ರದಲ್ಲಿಲ್ಲ. ಕಷ್ಟದಲ್ಲಿರುವವರನ್ನು ಮೇಲಕ್ಕೆತ್ತುವ ಕಾರ್ಯ ಕ್ಷೇತ್ರದಿಂದ ನಿರಂತರವಾಗಿ ನಡೆಯುತ್ತಿದೆ.ಜಾತಿ ಧರ್ಮವನ್ನು ಬದಿಗಿಟ್ಟು ಒಂದೇ ತಾಯಿಯ ಮಕ್ಕಳಂತೆ ನಾವೆಲ್ಲರೂ ಕ್ಷೇತ್ರದ ಅಭಿವೃದ್ದಿಯಲ್ಲಿ ಪಾಲುಪಡೆಯೋಣ ಎಂದವರು ಹೇಳಿದರು.






ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ನಿಧಿಸಂಚಯನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿ ಕ್ಷೇತ್ರದ ಬೆಳವಣಿಗೆ ಅಭಿವೃದ್ದಿಯಲ್ಲಿ ಅಡಗಿದೆ. ಕ್ಷೇತ್ರದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಲಿದೆ. ಇಚ್ಚಾ ಶಕ್ತಿ, ಕ್ರೀಯಾ ಶಕ್ತಿ, ಜ್ಞಾನ ಶಕ್ತಿ ಇದಲ್ಲಿ ಯಾವುದೇ ಕೆಲಸ ಯಶಸ್ಸಾಗಲು ಸಾಧ್ಯ. ಗುರುವಿಲ್ಲದಿದ್ದರೆ ಗುರಿ ಸಾಧಿಸಲಾಗದು. ಗುರುವಿನ ಆದರ್ಶದಂತೆ ಕ್ಷೇತ್ರದ ಧರ್ಮದರ್ಶಿಗಳು ನಡೆದುಕೊಂಡು ಬರುತ್ತಿದ್ದಾರೆ. ಧರ್ಮಕಾರ್ಯದ ಮೂಲಕ ಸಮಾಜದಿಂದ ಮಣ್ಣನೆ ಪಡೆಯಲು ಸಾಧ್ಯ. ಇಚ್ಚಾಶಕ್ತಿಯಿಂದ ಮಾಡಿದ ಧಾನಕ್ಕೆ ಹೆಚ್ಚು ಮಹತ್ವವಿದೆ. ಸೇವೆಗೆ ಅನುಗ್ರಹ ನಿಶ್ಚಿತ. ಒಳ್ಳೆಯ ಕಾರ್ಯದಲ್ಲಿ ವಿಘ್ನ, ತಡೆಗಳು ಸಹಜ. ಅದನ್ನು ನಿವಾರಿಸಿ ಮುನ್ನಡೆಯುವ ಮನಸ್ಸು ನಮ್ಮಲ್ಲಿರಬೇಕು ಎಂದರು.
ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲ್ ರವರು ಮಾತನಾಡಿ ನನಗೂ ಕುಕ್ಕಾಜೆ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಕ್ಷೇತ್ರದ ಬ್ರಹ್ಮ ಕಲಶೋತ್ಸವ ಬಹಳ ವಿಜ್ರಂಭಣೆಯಲ್ಲಿ ನಡೆಯುವಂತಾಗಲಿ. ನಮ್ಮ ಊರಿನ ಕ್ಷೇತ್ರಗಳು ಅಭಿವೃದ್ದಿಯಾದರೆ ಇಡೀ ಊರು ಅಭಿವೃದ್ದಿಯಾದಂತೆ. ನಮ್ಮ ನಂಬಿಕೆ ನಮ್ಮನ್ನು ಉಳಿಸುತ್ತದೆ. ನಿಧಿ ಸಂಚಯನ ಒಂದು ಪುಣ್ಯದ ಕೆಲಸವಾಗಿದೆ. ನಮ್ಮಿಂದಾಗುವ ಸಹಕಾರವನ್ನು ಕ್ಷೇತ್ರಗಳಿಗೆ ನೀಡುವುದು ಅನಿವಾರ್ಯವಾಗಿದೆ. ನಾವು ನಮ್ಮದೆನ್ನುವ ಭಾವನೆ ನಮ್ಮಲ್ಲಿ ಬಂದಾಗ ಯಾವುದೇ ಕೆಲಸಗಳು ಸಕಾರಗೊಳ್ಳಲು ಸಾಧ್ಯ. ನಾನು ನನ್ನಿಂದಾಗುವ ಸಹಕಾರವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.
ವಕೀಲರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರು ಮಾತನಾಡಿ ಬಹಳ ಪವಿತ್ರವಾದ ಕಾರ್ಯಕ್ರಮದಲ್ಲಿ ನಾವಿದ್ದೇವೆ. ನಮ್ಮ ಜೀವನದಲ್ಲಿ ನಾವು ಮಾಡಿದ ಒಳ್ಳೆಯ ಕಾರ್ಯ ಶಾಶ್ವಥವಾಗಿ ಉಳಿಯಲು ಸಾಧ್ಯ. ದೇವಿಯ ಸಂಕಲ್ಪ ಹಾಗೂ ಗುರು ಹಿರಿಯರ ಇಚ್ಚಾಶಕ್ತಿಯೊಂದಿಗೆ ಕೈಜೋಡಿಸಿದಾಗ ಜೀರ್ಣೋದ್ಧಾರ ಕಾರ್ಯ ಯಶಸ್ಸಾಗಲು ಸಾಧ್ಯ ಎಂದರು.
ಕ್ಷೇತ್ರದ ಮೊಕ್ತೇಸರ ಎಂ.ಕೆ. ಕುಕ್ಕಾಜೆರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕ್ಷೇತ್ರದಲ್ಲಿ ಆದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಕ್ಷೇತ್ರದ ಭಕ್ತರೇ ಕಾರಣ. ನಿರಂತರವಾಗಿ ಬಡ ಬಗ್ಗರ ಏಳಿಗೆಗಾಗಿ ಕ್ಷೇತ್ರದಿಂದ ಶ್ರಮಿಸಲಾಗುತ್ತಿದೆ. ಎಲ್ಲರೂ ಒಟ್ಟು ಸೇರಿ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ದಿಯಲ್ಲಿ ಪಾಲುಪಡೆಯೋಣ ಎಂದರು.

ಬಾಳೆಕಲ್ಲು ಗರಡಿ ಮನೆಯ ಮೊಕ್ತೇಸರರಾದ ಕೊರಗಪ್ಪ ಪೂಜಾರಿ ಕಾರ್ಯಕ್ರಮವನ್ನು ದೀಪಬೇಳಗಿಸಿ ಉದ್ಘಾಟಿಸಿದರು.
ಕುಕ್ಕಾಜೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಣಿಲ ಮುರುವ ಪಂಜುರ್ಲಿ ದೈವಸ್ಥಾನದ ಶ್ರೀಕಾಂತ್ ಮಾಣಿಲತ್ತಾಯ, ಮಾಣಿಲ ಗ್ರಾ.ಪಂ. ಅಧ್ಯಕ್ಷ ವನಿತಾ ತಾರಿದಳ, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಪೆರುವಾಯಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಂದ್ರ ರೈ ಪೆರುವಾಯಿ, ಜಗನ್ನಾಥ ರೈ ಕೆಳಗಿನ ಮನೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಶ್ಚಂದ್ರ ಬಳಂತಿಮೊಗರು, ವಿಶ್ವಹಿಂದೂ ಪರಿಷತ್ ಮಾಣಿಲ ಘಟಕದ ಸಂಚಾಲಕ ಉದಯ ಶೆಟ್ಟಿ, ಎಸ್. ನಾರಾಯಣ್, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ.ವಿ. ಕೊಪ್ಪಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಶ್ಮಿತಾ, ಸುಕನ್ಯ ಪ್ರಾರ್ಥಿಸಿದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಳೆಕಲ್ಲು ಸ್ವಾಗತಿಸಿದರು. ರವಿ ಎಸ್.ಎಂ. ವಂದಿಸಿದರು.









