ಪುತ್ತೂರು: ಸವಣೂರು ಯುವಕ ಮಂಡಲದ ಆಶ್ರಯದಲ್ಲಿ ಕೀರ್ತನ್ ಕುಮಾರ್ ಕೋಡಿಬೈಲುರವರ ಗದ್ದೆಯಲ್ಲಿ ಭತ್ತ ಬೇಸಾಯದ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಭತ್ತದ ನಾಟಿ ಕಾರ್ಯವನ್ನು ನಡೆಸಲಾಯಿತು. ಈ ಕಾರ್ಯಗಾರದಲ್ಲಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜ್ನ ವಿದ್ಯಾರ್ಥಿಗಳು ಭಾಗವಹಿಸಿದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯರವರು ಭತ್ತ ಬೇಸಾಯದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಸವಣೂರು ಯುವಕ ಮಂಡಲದ ಪದಾಧಿಕಾರಿಗಳು, ಸವಣೂರು ಸಿ.ಎ, ಬ್ಯಾಂಕ್ ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಕಿಶನ್ ಭಾಗವಹಿಸಿದರು. ಕಾರ್ಯಗಾರದ ಪ್ರಾಯೋಜಕ ಕೀರ್ತನ್ ಕುಮಾರ್ ಕೋಡಿಬೈಲುರವರು ಎಲ್ಲರನ್ನು ಸ್ವಾಗತಿಸಿ, ಉಪಹಾರದ ವ್ಯವಸ್ಥೆಯನ್ನು ಮಾಡಿದರು. ಯುವಕ ಮಂಡಲದ ಕಾರ್ಯದರ್ಶಿ ಜಿತಾಕ್ಷ ವಂದಿಸಿದರು.