ಪುತ್ತೂರು:ನೆಹರು ನಗರದ ಕಲ್ಲೇಗ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಶಿಮಂಗಳ ಸೌಹಾರ್ದ ಸಹಕಾರಿಯು 2021-22ನೇ ಸಾಲಿನಲ್ಲಿ ರೂ.15,65,361.19 ಲಾಭ ಗಳಿಸಿ ಸದಸ್ಯರಿಗೆ ಶೇ.11 ಡಿವಿಡೆಂಡ್ ವಿತರಿಸಲಾಗುವುದು ಎಂದು ಅಧ್ಯಕ್ಷ ವಿಜಯ ಕುಮಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.3ರಂದು ಸಂಘದ ಕಲ್ಲೇಗ ಭಾರತ್ ಮಾತಾ ಸಮುದಾಯಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು 496 ಸದಸ್ಯರಿಂದ ರೂ.10,57,650 ಪಾಲು ಬಂಡವಾಳ, ರೂ.1,73,45,690.69 ಠೇವಣಾತಿಗಳನ್ನು ಹೊಂದಿದೆ. ರೂ.1,59,78,576 ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ರೂ.38,50,169.88ನ್ನು ವಿವಿಧ ಸಂಘಗಳಲ್ಲಿ ವಿನಿಯೋಗಿಸಲಾಗಿದೆ ಎಂದರು.
ಉಪಾಧ್ಯಕ್ಷ ಅರವಿಂದ ಭವಾನ್ ರೈ ಎಸ್., ನಿರ್ದೇಶಕರಾದ ಗುಡ್ಡಪ್ಪ ಗೌಡ ಪಿ., ಪುರುಷೋತ್ತಮ ನಾಯ್ಕ್ ಹೆಚ್., ಸುದೀರ್ ಪ್ರಸಾದ್ ಎ., ಡಾ| ರವಿನಾರಾಯಣ ಸಿ., ಜೀವಿತ ಯು. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಶಸ್ವಿನಿ ಪ್ರಾರ್ಥಿಸಿದರು, ನಿರ್ದೇಶಕ ಪುರುಷೋತ್ತಮ ಕಿರ್ಲಾಯ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾವ್ಯ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ವಿಜಯ ಎನ್. ವಂದಿಸಿದರು. ಭವಿತ್, ಶ್ವೇತ್ ಕುಮಾರ್, ಸಿಬ್ಬಂದಿ ದೀಪ್ತಿ ಬಟ್ರುಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಸದಸ್ಯರಿಗೆ ಉದ್ಯೋಗ ಸೃಷ್ಟಿ ಮಾಡುವ ಕೆಲಸ ಮುಂದಿನ ದಿನಗಳಿಂದ ಆಗಲಿದೆ. ಸದಸ್ಯರು ಯಾವುದೇ ವ್ಯವಹಾರ ಮಾಡುವುದಿದ್ದರು ಅವರಿಗೆ ಸಂಘವೂ ಸಂಪೂರ್ಣ ಸಹಕಾರ ನೀಡಲಿದೆ. ಸಾಲ ಪಾವತಿಯನ್ನು ಸರಿಯಾಗಿ ಮಾಡಿದ ಸದಸ್ಯರಿಗೆ ಮುಂದಿನ ಸಭೆಯಲ್ಲಿ ಅವರನ್ನು ಗೌರವಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ – ಕೆ.ವಿಜಯ ಕುಮಾರ್, ಅಧ್ಯಕ್ಷರು