ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವರವರಿಗೆ ಪಿತೃವಿಯೋಗ

0

 

ವಿಟ್ಲ: ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವರವರ ತಂದೆ, ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕೊಡಾಜೆ ನಿವಾಸಿ ಬಾಬು ಆಳ್ವ( 84 ವ.)ರವರು ಅಲ್ಪ ಕಾಲದ ಅಸೌಖ್ಯದಿಂದಾಗ ಸೆ.೫ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಚಂದ್ರಾವತಿ,
ಪುತ್ರರಾದ ರಾಮಕೃಷ್ಣ ಆಳ್ವ, ರಾಧಾಕೃಷ್ಣ ಆಳ್ವ, ಹಾಗೂ ಮಾಣಿ ಗ್ರಾಮಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ, ಪುತ್ರಿ ಹೇಮಲತ, ಅಳಿಯ ರಾಮ್ ದಾಸ್, ಸೊಸೆಯಂದಿರಾದ ಸುಜಾತ, ಉಷಾ, ಸುಕನ್ಯ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಕೃಷಿ ಪ್ರಧಾನ ಕುಟುಂಬದಲ್ಲಿ ಹುಟ್ಟಿರುವ ಬಾಬು ಆಳ್ವರವರು ಸ್ವಸಾಮರ್ಥ್ಯದಿಂದ ಕೃಷಿಯನ್ನು ಅಭಿವೃದ್ಧಿಪಡಿಸಿ ಆ ಮೂಲಕ ಯಶಸ್ಸನ್ನು ಕೂಡಾ ಕಂಡವರು. ಧಾರ್ಮಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಬಾಬು ಆಳ್ವರವರು ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ಗ್ರಾಮ ದೈವಗಳಾದ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಕ್ಷೇತ್ರಗಳ ಅಭಿವೃದ್ಧಿ ಮತ್ತು ಸೇವಾಕಾರ್ಯಗಳಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡವರು. ತನ್ನ ಕುಟುಂಬ ಜಿಲ್ಲೆಯ ಪ್ರಸಿದ್ಧ ಪಡ್ಯಾರಮನೆ ಮನೆತನದ ಯಜಮಾನನಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ರಾಜಕೀಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಬಾಬು ಆಳ್ವರವರು ಮಂಡಲ ಪಂಚಾಯತ್ ಸದಸ್ಯರಾಗಿ, ಗ್ರಾಮ ಪಂಚಾಯತ್ ಸದಸ್ಯರಾಗಿ, ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಸದಸ್ಯರಾಗಿ, ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿ, ವಿದ್ಯಾಭಿವರ್ಧಕ ಸಂಘದ ನಿರ್ದೇಶಕರಾಗಿ, ಮಾಣಿ ಸರಕಾರಿ ಪ್ರಾಥಮಿಕ ಶಾಲೆಯ ಸಮಿತಿಯ ಅಧ್ಯಕ್ಷರಾಗಿ, ಯಕ್ಷಗಾನ ಸಮಿತಿಯ ಅಧ್ಯಕ್ಷರಾಗಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು.
ಪ್ರಮುಖ ರಾಜಕೀಯ ಪಕ್ಷ ರಾಷ್ಟ್ರೀಯ ಕಾಂಗ್ರೆಸ್ಸಿನ ಗ್ರಾಮ ಮಟ್ಟದ ನಾಯಕತ್ವವನ್ನೂ ವಹಿಸಿದವರು. ಸ್ಥಳೀಯ ಕೂಟಗಳಲ್ಲಿ ಯಕ್ಷಗಾನ ಅರ್ಥದಾರಿಯಾಗಿ, ವೇಶದಾರಿಯಾಗಿಯೂ ಯಶಸ್ಸನ್ನು ಕಂಡವರು.

LEAVE A REPLY

Please enter your comment!
Please enter your name here