ಪುತ್ತೂರು: ಆರ್ಯಾಪು ಗ್ರಾಮದ ಗ್ರಾಮ ದೇವಸ್ಥಾನವಾದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ. 5ರಂದು ದ್ರವ್ಯಕಲಶಾಭಿಷೇಕ ಜರಗಿತು. ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಕಾರ್ಯಕ್ರಮ ಹಾಗೂ ದ್ರವ್ಯಕಲಶವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸೆ. 2ರಿಂದ ಸೆ. 5ರವರೆಗೆ ದೇವಸ್ಥಾನದಲ್ಲಿ ನಡೆಯಿತು.
ಸೆ. 2, 3 ಹಾಗೂ 4ರಂದು ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮ ಜರಗಿ, ಸೆ. 5ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಶ್ರೀ ಸುಬ್ರಹ್ಮಣ್ಯ ದೇವರಿಗೆ ದ್ರವ್ಯಕಲಶಾಭಿಷೇಕ ಹಾಗೂ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಇದೇ ಸಂದರ್ಭ ವಿವಿಧ ಸಂಸ್ಥೆಗಳಿಂದ ಭಜನೆ ಜರಗಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು, ಸಮಿತಿ ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ದಾಮೋದರ ರೈ ತೊಟ್ಲ, ವಿಠಲ ರೈ ಮರ್ಲ, ಕಿಶೋರ ಗೌಡ ಮರಿಕೆ, ಭಾರತಿ ಶಾಂತಪ್ಪ ಪೂಜಾರಿ ಕಾರ್ಪಾಡಿ, ವನಿತಾ ನಾಯಕ್ ಮರಿಕೆ, ಅರ್ಚಕ ತೇಜಸ್ ಪೋಳ್ನಾಯ, ರಾಘವೇಂದ್ರ ಪುತ್ತೂರಾಯ ಕುಕ್ಕಾಡಿ, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.