ಒಕ್ಕಲಿಗ ಗೌಡ ಸೇವಾ, ಸ್ವಸಹಾಯ ಒಕ್ಕೂಟ, ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್, ಕಾಮಧೇನು ಚಾರಿಟೇಬಲ್‌ನಿಂದ ರಕ್ತದಾನ ಶಿಬಿರ-ಸನ್ಮಾನ

0

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಕಾಮಧೇನು ವಿವಿಧೋದ್ದೇಶ ಚಾರಿಟೇಬಲ್ ಟ್ರಸ್ಟ್ ಸುಳ್ಯ, ಚಿಕ್ಕಮುಡ್ನೂರು ಮತ್ತು ಬನ್ನೂರು ಒಕ್ಕಲಿಗ ಸ್ವಸಹಾಯ ಗುಂಪುಗಳ ಒಕ್ಕೂಟ ಇವುಗಳ ನೇತೃತ್ವದಲ್ಲಿ ಚಿಕ್ಕಮುಡ್ನೂರು ಮತ್ತು ಬನ್ನೂರು ಗ್ರಾಮದ ಸಾರ್ವಜನಿಕರಿಂದ ಕೆಮ್ಮಾಯಿ ಶ್ರೀವಿಷ್ಣುಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಬೈಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈ ಸೇವಾ ಸಂಘಗಳು ರಕ್ತದಾನ ಮಾಡುವ ಯುಕ ಯುವತಿಯರಿಗೆ ಮಾಹಿತಿ ನೀಡಿ ಮನೊಲಿಸುವ ಕೆಲಸ ಮಾಡಿದರೆ ಅದೊಂದು ಪುಣ್ಯದ ಕೆಲಸ. ಇದರ ಪ್ರಯೋಜನ ಎಲ್ಲಾ ಜನರಿಗೆ ಸಿಗಬೇಕು ಎಂದು ಹೇಳಿ ಶುಭಹಾರೈಸಿದರು. ಕಾಮಧೇನು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತನಾಡಿ ದಾನಗಳಲ್ಲಿ ರಕ್ತದಾನ ಅತೀ ಶ್ರೇಷ್ಟ ದಾನವಾಗಿದೆ. ನಾವು ಜೀವಂತವಾಗಿದ್ದಾಗಲೇ ಮತ್ತೊಬ್ಬರ ಜೀವವನ್ನು ಉಳಿಸುವ ಪುಣ್ಯದ ಕಾರ್ಯ ರಕ್ತದಾನದಿಂದ ಸಾಧ್ಯ. ರಕ್ತದಾನಕ್ಕೆ ಪರ್ಯಾಯ ವ್ಯವಸ್ಥೆಗಳಿಲ್ಲ. ಹೀಗಾಗಿ ರಕ್ತದಾನ ಶ್ರೇಷ್ಟದಾನವಾಗಿದೆ. ರಕ್ತದಾನದ ಜೊತೆಗೆ ಜಿಲ್ಲೆಯಲ್ಲಿ ಅತೀಹೆಚ್ಚು ರಕ್ತದಾನ ಮಾಡಿದವರನ್ನು ಗುರುತಿಸುವ ಯೋಜನೆಯನ್ನು ಕೂಡ ಇಂದು ಈ ವೇದಿಕೆಯಲ್ಲಿ ಇಟ್ಟುಕೊಂಡಿದ್ದೇವೆ. ಆದುದರಿಂದ ಯುವಕರು ಮುಂದೆ ಬಂದು ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದರು. ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ರಾಮಚಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರಕ್ತದಾನ ಮಾಡುವವವರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಒಬ್ಬ ದಾನಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಎಷ್ಟು ಬಾರಿಯಾದರೂ ಒಬ್ಬರು ರಕ್ತ ನೀಡಬಹುದು ಎಂದು ಮಾಹಿತಿ ನೀಡಿದರು. ಕೃಷ್ಣನಗರ ಆಯುರ್ವೇದ ಕ್ಲಿನಿಕ್‌ನ ಡಾ.ಅನುಪಮಾ ಕೆ.ಎಸ್. ಮಾತನಾಡಿ ಆರೋಗ್ಯದ ಮಾಹಿತಿ ನೀಡಿದರು. ವಿಜಯಾ ಬ್ಯಾಂಕ್ ನಿವೃತ್ತ ಮೆನೇಜರ್ ಸೋಮಪ್ಪ ಗೌಡ ಬಡಾವು, ಬನ್ನೂರು ಒಕ್ಕಲಿಗ ಸ್ವಸಹಾಯ ಒಕ್ಕೂಟದ ಅಧ್ಯಕ್ಷ ಸೋಮಪ್ಪ ಗೌಡ, ಚಿಕ್ಕಮುಡ್ನೂರು ಒಕ್ಕಲಿಗ ಸ್ವಸಹಾಯ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಗೌಡ ಕೆಮ್ಮಾಯಿ ಶುಭಹಾರೈಸಿದರು. ಚಿಕ್ಕಮುಡ್ನೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಬಡಾವು ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.

ಪುತ್ತೂರು ಒಕ್ಕಲಿಗ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಚಿದಾನಂದ ಬೈಲಾಡಿ, ಕಾಮಧೇನು ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಮಾಧವ ಗೌಡ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ ಡಿ.ವಿ., ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಬನ್ನೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ರಮೇಶ್ ಏಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ : ದ.ಕ.ಜಿಲ್ಲೆಯಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಸನ್ಮಾನಿಸಲಾಯಿತು. ೧೪ ಬಾರಿ ರಕ್ತದಾನ ಮಾಡಿದ ಜಯಪ್ರಕಾಶ್ ದೇವಸ್ಯ ಬೆಳ್ಳಿಪ್ಪಾಡಿ, ೬೧ ಬಾರಿ ರಕ್ತದಾನ ಮಾಡಿದ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್, ೭೬ ಬಾರಿ ರಕ್ತದಾನ ಮಾಡಿದ ವಸಂತ ಜಾಲಾಡಿರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಗೌರವಾರ್ಪಣೆ : ಕಾಮಧೇನು ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಮಾಧವ ಗೌಡ ರವರನ್ನು ಗೌರವಿಸಲಾಯಿತು. ಸ್ಟಾಫ್ ನರ್ಸ್‌ಗಳಾದ ಸಜನಿ ಮಾರ್ಟಿಸ್, ನಿವೇದಿತಾ, ಶ್ರುತಿ, ಒಕ್ಕೂಟದ ಕೋಶಾಧಿಕಾರಿ ಶ್ರೀನಿವಾಸ ಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿಸಿ ಸದಸ್ಯ ವೆಂಕಪ್ಪ ಗೌಡ ಸಹಕರಿಸಿದರು. ಉಮಾವತಿ, ಶ್ರೀದೇವಿ, ನಮಿತಾ ಪ್ರಾರ್ಥಿಸಿ ಚಿಕ್ಕಮುಡ್ನೂರು ಒಕ್ಕಲಿಗ ಸ್ವಸಹಾಯ ಒಕ್ಕೂಟದ ಉಪಾಧ್ಯಕ್ಷ, ನಿವೃತ್ತ ಸೈನಿಕ ನಾಗಪ್ಪ ಗೌಡ ಸ್ವಾಗತಿಸಿದರು. ಆನಂದ ಗೌಡ ರೋಟರಿಪುರ ವಂದಿಸಿದರು. ಚಂದ್ರಾಕ್ಷ ಗೌಡ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here