ಯುವವಾಹಿನಿ ಉಪ್ಪಿನಂಗಡಿ ಘಟಕದ ಮಹಾಸಭೆ, ಯುವ ಬಾಂಧವ್ಯ ಸಮಾರೋಪ

0

ಯುವ ಸಮುದಾಯ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಿ- ನ್ಯಾಯವಾದಿ ಸಂತೋಷ್ ಕುಮಾರ್

ಪುತ್ತೂರು:ಯುವಕರು ಸಮಾಜದ ಸಮಸ್ಯೆ, ನೋವುಗಳಿಗೆ ಸ್ಪಂದಿಸುವ ಹಾಗೂ ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡಾಗ ಆವರ ಮೂಲಕ ಸಂಘಟನೆಗಳ ಉದ್ದೇಶ ಸಾರ್ಥಕವಾಗಬಲ್ಲುದು. ಯುವವಾಹಿನಿ ಸಂಘಟನೆಯ ಸಾಧನೆಗಾಗಿ  ರಾಜ್ಯ ಪ್ರಶಸ್ತಿ ಪಡೆದಿರುವುದು ಅಭಿನಂದನಾರ್ಹ ಎಂದು ಉಪ್ಪಿನಂಗಡಿಯ ನ್ಯಾಯವಾದಿ ಸಂತೋಷ್ ಕುಮಾರ್ ಹೇಳಿದರು. 

ಅವರು  ಡಿ.22 ರಂದು ಬೆಳ್ಳಿಪ್ಪಾಡಿ  ಚಂದ್ರಶೇಖರ ಕೆ ಸನಿಲ್ ರವರ ಮನೆ “ಯಮುನಾ” ದಲ್ಲಿ ನಡೆದ  ಯುವವಾಹಿನಿ ಉಪ್ಪಿನಂಗಡಿ ಘಟಕದ ಮಹಾಸಭೆ ಮತ್ತು ಯುವ ಬಾಂಧವ್ಯ 2025ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.. ಯುವವಾಹಿನಿ ಸಂಘಟನೆ ಎಲ್ಲಾ ಸಮುದಾಯಗಳ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಪಾಲಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಯುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಹಿರೇಬಂಡಾಡಿ ಅಂಚೆ ಸಹಾಯಕರಾದ ಹರೀಶ್ ಪಾಲೆತ್ತಡಿರವರು ಮಾತನಾಡಿ, ಸಂಘಟನೆಯೆಂಬುದು  ನಿರಂತರವಾದ ವ್ಯವಸ್ಥೆ, ಅದನ್ನು ಮುನ್ನಡೆಸುವ ಸಾಮರ್ಥ್ಯವನ್ನು  ಸದಸ್ಯರು ತೋರಿಸಬೇಕು ಎಂದರು. 

ಘಟಕದ ಗೌರವ ಸಲಹೆಗಾರರಾದ ವರದರಾಜ್ ಎಂರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ವಹಿಸಿದ್ದರು. ಚುನಾವಣಾಧಿಕಾರಿ  ಸೋಮಸುಂದರ್ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದರು. ಬೆಳ್ಳಿಪ್ಪಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ವಸಂತ ಕುಂಡಾಪು ಶುಭ ಹಾರೈಸಿದರು.

ಬೇಬಿ ಸಾನಿಧ್ಯ ಪ್ರಾರ್ಥಿಸಿದರು. ಅಧ್ಯಕ್ಷ ನಾಣ್ಯಪ್ಪ ಕೋಟ್ಯಾನ್ ಸ್ವಾಗತಿಸಿ, ನಿರ್ದೇಶಕ ರಾಜೀವ ಇಪ್ಪನೋಟ್ಟು ವಂದಿಸಿದರು. ನಿರ್ದೇಶಕ ರಮೇಶ್ ಸಾಂತ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here