ಪುತ್ತೂರು: ಇಲ್ಲಿನ ಎಂ.ಟಿ. ರಸ್ತೆಯ ಚೇತನಾ ಆಸ್ಪತ್ರೆ ಹತ್ತಿರ ಕ್ಯಾಂಪ್ಕೋ ಬಿಲ್ಡಿಂಗ್ ಎದುರುಗಡೆ ಜ್ಯೂಸ್ ಮತ್ತು ಬೇಕರಿ ಐಟಂಗಳ ಮಳಿಗೆ ಶ್ರೀ ದುರ್ಗಾ ಬೇಕರಿ ಸೆ. 8ರಂದು ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಮಾಲಕರ ತಾಯಿ ಸುಶೀಲಾ ಅನಂತಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ರಿಬ್ಬನ್ ಕತ್ತರಿಸಿ ಮಾತನಾಡಿದ ಚೇತನಾ ಆಸ್ಪತ್ರೆಯ ಪಾಲುದಾರ ಡಾ. ಜೆ.ಸಿ. ಅಡಿಗ, ಈ ಪರಿಸರದಲ್ಲಿ ಕ್ಯಾಂಪ್ಕೋ, ಆಸ್ಪತ್ರೆ, ಸರಕಾರಿ ಇಲಾಖೆಗಳು ಸೇರಿದಂತೆ ಅನೇಕ ಸಂಸ್ಥೆಗಳಿವೆ. ಆದ್ದರಿಂದ ಈ ಪರಿಸರಕ್ಕೆ ಅಗತ್ಯವಾಗಿ ಒಂದು ಬೇಕರಿ ಹಾಗೂ ಚಾಟ್ಸ್ ನ ಅಗತ್ಯವಿತ್ತು. ಈ ಬೇಡಿಕೆಯನ್ನು ರಾಜೇಶ್ ದಂಪತಿ ಪೂರೈಸಿದ್ದು, ಇಲ್ಲಿ ಬೇಕರಿಯ ಜೊತೆಗೆ ಚಾಟ್ಸ್ ಐಟಂಗಳು ಒಂದೇ ಸೂರಿನಡಿ ಸಿಗುವುದು ಸಂತೋಷದ ವಿಷಯ. ಗ್ರಾಹಕರ ಬೇಡಿಕೆಯನ್ನು ಪೂರೈಸುವ ಜೊತೆಗೆ ಈ ಸಂಸ್ಥೆ ಉತ್ತಮ ಪ್ರಗತಿ ಕಾಣಲಿ ಎಂದು ಶುಭಹಾರೈಸಿದರು.
ಸಂಸ್ಥೆಯ ಮಾಲಕ ರಾಜೇಶ್ ಅನಂತಾಡಿ ಮಾತನಾಡಿ, ನಮ್ಮಲ್ಲಿ ಎಲ್ಲಾ ತರಹದ ಸ್ವೀಟ್ಸ್, ಖಾರ ತಿಂಡಿ – ತಿನಿಸುಗಳು, ತಂಪು ಪಾನೀಯಗಳು, ಚಾಟ್ ಐಟಂಗಳು, ಚಾ, ಕಾಫಿ, ಐಸ್ ಕ್ರೀಮ್ ಮತ್ತು ದೋಸೆ ಐಟಂಗಳು ದೊರೆಯುತ್ತದೆ. ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
ಗಣೇಶ್ ಭಟ್ ಕೇಕಣಾಜೆ, ಮುಖ್ಯ ಅತಿಥಿಗಳಾಗಿದ್ದರು. ಸುಶೀಲ, ಜಯರಾಮ, ರಂಜಿತಾ ರಘುನಾಥ್, ಲಲಿತಾ, ನವೀನ್, ಅರುಣ, ವಿಮಲಾ ನಾರಾಯಣ್, ಮುನೀಶ್ ಮನೋಹರ್, ಹರ್ಷಿತ್ ವೇಣುಗೋಪಾಲ್, ಯಶೋಧ ರಾಜೇಶ್, ಸೀನಪ್ಪ ಪೂಜಾರಿ, ನಿತಿನ್ ಉಪಸ್ಥಿತರಿದ್ದರು.
ದೀಕ್ಷಿತ ರಾಜೇಶ್ ಅನಂತಾಡಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.