ಸೆ.10: ರಾಮಕೃಷ್ಣ ಪುತ್ತೂರು ಯುವ ಇಂಟರೆಕ್ಟ್ ಕ್ಲಬ್ ಉದ್ಘಾಟನೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ರಾಮಕೃಷ್ಣ ಪುತ್ತೂರು ಯುವ ಇಂಟರೆಕ್ಟ್ ಕ್ಲಬ್ ಉದ್ಘಾಟನೆಯು ಸೆ.10 ರಂದು ಮಧ್ಯಾಹ್ನ 3 ಗಂಟೆಗೆ ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಲಿದೆ.

ಜಿಲ್ಲಾ ಇಂಟರೆಕ್ಟ್ ಪ್ರತಿನಿಧಿ ಕೆ.ತನ್ವಿ ಶೆಣೈರವರುರವರು ಪದಗ್ರಹಣವನ್ನು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ರೋಟರಿ ಕ್ಲಬ್‌ನ ಜೋನ್ 5 ರ ಆಸಿಸ್ಟೆಂಟ್ ಗವರ್ನರ್ ಎ.ಜಗಜೀವನ್‌ದಾಸ್ ರೈ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ರವರು ಭಾಗವಹಿಸಲಿದ್ದಾರೆ ಕಾರ್‍ಯಕ್ರಮದ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here