ಪುತ್ತೂರು: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಸ್ಥಳೀಯ ಹೊಟೇಲ್ ವೊಂದರ ನೌಕರರು ತ್ಯಾಜ್ಯ ಎಸೆಯುತ್ತಿರುವುದನ್ನು ಸಾರ್ವಜನಿಕರು ಪತ್ತೆ ಹಚ್ಚಿದ ಘಟನೆ ಸೆ.12 ರ ತಡರಾತ್ರಿ ನಡೆದಿದ ಬಗ್ಗೆ ವರದಿಯಾಗಿದೆ.
ಕಳೆದ ಕೆಲಸಮಯಗಳಿಂದ ಈ ಭಾಗದಲ್ಲಿ ಯಾರೋ ತ್ಯಾಜ್ಯ ಎಸೆದು ಹೋಗುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿದ್ದ ಸಾರ್ವಜನಿಕರು ಕಸ ಎಸೆಯುತ್ತಿರುವವನ್ನು ಪತ್ತೆಹಚ್ಚಲು ಕಾದುಕುಳಿತಿದ್ದರು. ಈ ಪೈಕಿ ಸ್ಥಳೀಯ ಹೊಟೇಲ್ ಒಂದರ ಸಿಬ್ಬಂದಿಗಳು ತಡರಾತ್ರಿ ತ್ಯಾಜ್ಯ ಎಸೆಯುತ್ತಿದ್ದಂತೆ ಅವರನ್ನು ಹಿಡಿದ ಸಾರ್ವಜನಿಕರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ರಸ್ತೆ ಬದಿ ತ್ಯಾಜ್ಯ ಎಸೆಯುತ್ತಿದ್ದವರನ್ನು ಠಾಣೆಗೆ ಕರೆದೊಯ್ದಿದಿದ್ದಾರೆ ಎಂದು ಮಾಹಿತಿ ಲಭಿಸಿದೆ.