ಕರಾವಳಿ ಪ್ರದೇಶದ ಭತ್ತದಲ್ಲಿ ಪೊಟ್ಯಾಷಿಯಂ ಪೋಷಕಾಂಶದ ನಿರ್ವಹಣೆ ಕುರಿತು ರೈತರಿಗೆ ತರಬೇತಿ

0

ನಿಡ್ಪಳ್ಳಿ: ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ವತಿಯಿಂದ ಹಿರೇಬಂಡಾಡಿ ಗ್ರಾಮದಲ್ಲಿ ಕರಾವಳಿ ಪ್ರದೇಶದ ಭತ್ತದಲ್ಲಿ ಪೊಟ್ಯಾಷಿಯಂ ಪೋಷಕಾಂಶದ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಮಲ್ಲಿಕಾರ್ಜುನ ಎಲ್ ಮಾತನಾಡಿ ಪೊಟ್ಯಾಷಿಯಂ ಪೋಷಕಾಂಶದ ಶಿಫಾರಸಿನ ಪ್ರಮಾಣವನ್ನು ಮಣ್ಣು ಪರೀಕ್ಷೆಯ ಆಧಾರದ ಮೇಲೆ ಮೂರು ಕಂತುಗಳಲ್ಲಿ ಅಂದರೆ ಕ್ರಮವಾಗಿ ನಾಟಿ ಮಾಡುವಾಗ ಶೇ.50 ರಷ್ಟು, ನಾಟಿ ಮಾಡಿದ ನಂತರ 30 -35 ದಿನಗಳಲ್ಲಿ ಶೇ.25 ರಷ್ಟು ಹಾಗೂ ನಾಟಿ ಮಾಡಿದ 50-60 ದಿನಗಳಲ್ಲಿ ಉಳಿದ ಶೇ. 25 ರಷ್ಟನ್ನು ಒದಗಿಸುವುದರಿಂದ ಹೆಚ್ಚಿನ ಪ್ರಮಾಣದ ಪೊಟ್ಯಾಷಿಯಂ ವ್ಯರ್ಥವಾಗುವುದನ್ನು ತಪ್ಪಿಸಿ ಇದರ ಲಭ್ಯತೆ ಭತ್ತದ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ದೊರಕುವಂತಾಗಿ ಭತ್ತದ ಉತ್ತಮ ಗುಣಮಟ್ಟ ಹಾಗೂ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ ಎಂದು ರೈತರಿಗೆ ತಿಳಿಸಿದರು.
ತೋಟಗಾರಿಕೆ ವಿಜ್ಞಾನಿ ಡಾ| ರಶ್ಮಿ ಆರ್ ಮಾತನಾಡಿ ಆರೋಗ್ಯಕರ ಜೀವನಕ್ಕಾಗಿ ಪೌಷ್ಟಿಕ ಕೈ ತೋಟದ ಮಹತ್ವದ ಕುರಿತು ಮಾಹಿತಿ ನೀಡಿದರು. ಈ ತಂತ್ರಜ್ಞಾನದ ಮಂಚೂಣಿ ಪ್ರಾತ್ಯಕ್ಷಿಕೆಗಾಗಿ ಆಯ್ದ ಹತ್ತು ಜನ ರೈತರ ಗದ್ದೆಗಳಲ್ಲಿ ಕ್ಷೇತ್ರ ಪ್ರಯೋಗಗಳನ್ನು ಕೈಗೊಳ್ಳಲು ರಸಗೊಬ್ಬರದ ಪರಿಕರಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರಿಶಿಷ್ಟ ಜಾತಿಯ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಿದರು.ರೈತರ ಪ್ರಶ್ನೆಗಳಿಗೆ ಸೂಕ್ತ ಸಲಹೆ ನೀಡಲಾಯಿತು.

LEAVE A REPLY

Please enter your comment!
Please enter your name here